More

    ಬಸವಣ್ಣರ ಚಿಂತನೆಗಳು ಮಾನವೀಯ ಸೇವೆ ಮಾಡಲು ಸ್ಫೂರ್ತಿ ನೀಡುತ್ತವೆ: ಪ್ರಧಾನಿ ಮೋದಿ

    ನವದೆಹಲಿ: ಇಂದು ನಾಡಿನೆಲ್ಲೆಡೆ ಬಸವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್​ನಲ್ಲಿ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ.

    ಇಂದು ಬಸವ ಜಯಂತಿಯ ಪವಿತ್ರ ಸಂದರ್ಭದಲ್ಲಿ ನಾನು ಜಗದ್ಗುರು ಬಸವೇಶ್ವರರಿಗೆ ನಮಿಸುತ್ತೇನೆ. ಅವರ ಚಿಂತನೆಗಳು ಮತ್ತು ಆದರ್ಶಗಳು ನಮಗೆ ಮಾನವೀಯ ಸೇವೆ ಮಾಡಲು ಸ್ಫೂರ್ತಿ ನೀಡುತ್ತವೆ. ದೀನದಲಿತರನ್ನು ಸಬಲೀಕರಣಗೊಳಿಸಲು ಮತ್ತು ಸದೃಢ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಬಸವಣ್ಣನವರು ಒತ್ತು ನೀಡಿದರು ಎಂದು ಪ್ರಧಾನಿ ಮೋದಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಇದನ್ನೂ ಓದಿ: ರಸ್ತೆಬದಿ ಊಟ ಸೇವಿಸಿದ ಸಚಿವ ಎಸ್.ಟಿ. ಸೋಮಶೇಖರ್!

    ಲಂಡನ್​ನಲ್ಲಿ ನಿರ್ಮಾಣವಾಗಿರುವ ಬಸವಣ್ಣರ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದ ವಿಡಿಯೋವನ್ನು ಪ್ರಧಾನಿ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ನಿರಂತರ ಸ್ಫೂರ್ತಿಚೇತನ: ಬಸವ ಜಯಂತಿ ಪ್ರಯುಕ್ತ ಬಿಎಸ್​ವೈ ಲೇಖನ

    ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳ ನೂತನ ಅಭಿದಾನ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts