More

    ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್​ ಟ್ರಂಪ್​ ಚರ್ಚಿಸಿದ್ದೇನು?

    ವಾಷಿಂಗ್ಟನ್​: ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಸರಿ ಪಡಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಆಫರ್​ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಎರಡು ದೇಶಗಳ ನಡುವೆ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಪ್ರಧಾನಿ ಮೋದಿ ಒಳ್ಳೆಯ ಮೂಡ್​ನಲ್ಲಿ ಇಲ್ಲವೆಂದು ತಿಳಿಸಿದ್ದಾರೆ.

    ಇದನ್ನೂ ಓದಿ: ನರೇಗಾ ಅಕ್ರಮ, 43 ನೌಕರರಿಗೆ ಶಿಕ್ಷೆ ಖಾತ್ರಿ: 18 ಸಿಬ್ಬಂದಿ ವಜಾ, 9 ಪಿಡಿಒಗಳ ಸಸ್ಪೆಂಡ್

    ಗುರುವಾರ ವೈಟ್​ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತಿದೊಡ್ಡ ಜನಸಂಖ್ಯೆ ಇರುವ ಎರಡು ರಾಷ್ಟ್ರಗಳ ನಡುವೆ ಬಹಿದೊಡ್ಡ ಘರ್ಷಣೆ ಉಂಟಾಗಿದೆ. ಎರಡು ದೇಶಗಳು ಸಹ ಬಲಿಷ್ಠವಾದ ಸೇನಾ ಪಡೆಗಳನ್ನು ಹೊಂದಿವೆ. ಘರ್ಷಣೆಯಿಂದ ಭಾರತ ಸಂತೋಷವಾಗಿಲ್ಲ ಮತ್ತು ಬಹುಶಃ ಚೀನಾ ಕೂಡ ಖುಷಿಯಾಗಿಲ್ಲ ಎಂದು ಹೇಳಿದರು.

    ಈ ದೇಶ (ಅಮೆರಿಕ) ದಲ್ಲಿ ಮಾಧ್ಯಮಗಳು ನನ್ನನ್ನು ಇಷ್ಟಪಡುವುದಕ್ಕಿಂತ ಭಾರತದಲ್ಲಿ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆಂದು ನಾನು ಭಾವಿಸುತ್ತೇನೆ. ನಾನು ಮೋದಿ ಅವರನ್ನು ಇಷ್ಟಪಡುತ್ತೇನೆ. ನಿಮ್ಮ ಪ್ರಧಾನಿಯನ್ನು ಹೆಚ್ಚು ಗೌರವಿಸುತ್ತೇವೆ. ಅವರೊಬ್ಬ ಉತ್ತಮ ವ್ಯಕ್ತಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

    ಇದನ್ನೂ ಓದಿ: ಸಾವರ್ಕರ್ ಹೆಸರಿಟ್ಟ ಸಾರ್ವಜನಿಕರು: ಯಲಹಂಕ ಮೇಲ್ಸೇತುವೆ ಮೇಲೆ ಹೆಸರು ಬರೆದ ಜನ

    ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಏನು ಮಾತನಾಡಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಚೀನಾದೊಂದಿಗೆ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಅವರ ಮನಸ್ಥಿತಿ ಸರಿಯಿಲ್ಲ ಎಂದು ಹೇಳಿದರು. (ಏಜೆನ್ಸೀಸ್​)

    ಭಾರತ-ಚೀನಾ ಗಡಿ ವಿವಾದ; ಮಧ್ಯಸ್ಥಿಕೆ ವಹಿಸಲು ಸಿದ್ಧವೆಂದ ಯುಎಸ್​ ಅಧ್ಯಕ್ಷ ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts