More

    ಜರ್ಮನ್​ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್​ರ ‘ಅಚ್ಯುತಂ ಕೇಶವಂ’ ಹಾಡು ಕೇಳಿ ಮನಸೋತ ಪ್ರಧಾನಿ ಮೋದಿ!

    ಚೆನ್ನೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ತಮಿಳುನಾಡಿನ ಪಲ್ಲಡಂನಲ್ಲಿ ಜರ್ಮನ್ ಮೂಲದ ಗಾಯಕಿ-ಗೀತರಚನೆಕಾರ್ತಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ ಮತ್ತು ಅವರ ತಾಯಿಯನ್ನು ಭೇಟಿಯಾಗಿದ್ದಾರೆ.

    ಇದನ್ನೂ ಓದಿ: ಅಡ್ಡಮತದಾನ ಪರಿಕಲ್ಪನೆ ಜನಕನೇ ಕಾಂಗ್ರೆಸ್: ಮಾಜಿ ಸಿಎಂ ಕುಮಾಸ್ವಾಮಿ ವಾಗ್ದಾಳಿ

    21 ವರ್ಷದ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ ಅವರು ಮೋದಿ ಮುಂದೆ ‘ಅಚ್ಯುತಂ ಕೇಶವಂ’ ಮತ್ತು ತಮಿಳು ಹಾಡನ್ನು ಹಾಡಿದ್ದಾಳೆ. ಮೋದಿ ಅವರು ಸಂಗೀತವನ್ನು ಆನಂದಿಸುತ್ತಿರುವ ವಿಡಿಯೋ ವೈರಲ್​ ಆಗುತ್ತಿದೆ.

    ಗಾಯಕಿ ಕ್ಯಾಸಮಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಪ್ರಸಿದ್ಧಿಯಾಗಿದ್ದಾಳೆ. ಜರ್ಮನಿಯ ನಿವಾಸಿ ಕ್ಯಾಸಮಿ ಭಾರತಕ್ಕೆ ಎಂದಿಗೂ ಭೇಟಿ ನೀಡಿಲ್ಲ. ಆದರೆ ಆಕೆ ಭಾರತೀಯ ಸಂಗೀತದ ಅಭಿಮಾನಿ. ಭಾರತೀಯ ಸಂಸ್ಕೃತಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾಳೆ.

    ಬಾಲ್ಯದಿಂದಲೇ ಸಂಗೀತದ ಆಸಕ್ತಿ: ಸಂಗೀತದ ಕಡೆ ಅಪಾರ ಆಸಕ್ತಿ ಹೊಂದಿರುವ ಗಾಯಕಿ ಕ್ಯಾಸಮಿ ಕ್ಯಾಸಂಡ್ರ, ಬಾಲ್ಯದಿಂದಲೇ ಹಾಡು ಹಾಡುವ ಸೃಜನಶೀಲತೆಯನ್ನು ಬೆಳೆಸಿಕೊಂಡವಳು. ಕೇವಲ ಮೂರು ವರ್ಷದವಳಿದ್ದಾಗಲೇ ಆಕೆ ಆಫ್ರಿಕನ್ ಡ್ರಮ್ ಕಲಿಕೆ ಆರಂಭಿಸಿದ್ದಳು. ಐದಾರು ವರ್ಷಗಳ ಹಿಂದೆ ಭಾರತೀಯ ಸಂಗೀತದ ಬಗ್ಗೆ ಆಕೆಗೆ ತಿಳಿದರೂ, ಅದನ್ನು ಕಲಿತುಕೊಂಡು, ಸಂಪೂರ್ಣವಾಗಿ ಅದರಲ್ಲಿ ಮುಳುಗಿದಳು.

    ಕ್ಯಾಸಂಡ್ರ ಮೇ ಸ್ಪಿಟ್‌ಮನ್, ಹಾಡುವುದರ ಜತೆ ಗೀತೆಗಳನ್ನು ಕೂಡ ರಚಿಸುತ್ತಾಳೆ. ಕ್ಯಾಸಮಿ ಅಫಿಷಿಯಲ್ ಎಂಬ ಇನ್‌ಸ್ಟಾಗ್ರಾಂ ಖಾತೆ, ಯೂಟ್ಯೂಬ್ ಚಾನೆಲ್‌ನಲ್ಲಿ ಆಕೆ ಕನ್ನಡ, ಸಂಸ್ಕೃತ, ಹಿಂದಿ, ತಮಿಳು ಸೇರಿದಂತೆ ವಿವಿಧ ಭಾಷೆಗಳ ಮಧುರ ಗೀತೆಗಳನ್ನು ಹಂಚಿಕೊಳ್ಳುತ್ತಿದ್ದಾಳೆ.

    ಮನ್ ಕಿ ಬಾತ್‌’ನ 105ನೇ ಸಂಚಿಕೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್ ಆವರ ಕುರಿತು ಉಲ್ಲೇಖಿಸಿದ್ದರು. ಭಾರತೀಯ ಸಂಸ್ಕೃತಿ ಮತ್ತು ಸಂಗೀತವು ಜಾಗತಿಕಗೊಂಡಿವೆ. ಹೆಚ್ಚು ಹೆಚ್ಚು ಜನರು ಅದರ ಕಡೆಗೆ ಸಮ್ಮೋಹಿತರಾಗುತ್ತಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದ್ದರು. ಇದಕ್ಕೆ ಅವರು ಜರ್ಮನ್ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ಳ ಉದಾಹರಣೆ ಎಂದು ಮೋದಿ ಅವರು ಹೇಳಿದ್ದರು.

    ಬೆಟ್ಟಿಂಗ್‌ ಚಟ: ಆನ್​ಲೈನ್​ ಆ್ಯಪ್​ ಸಾಲ ತೀರಿಸಲಾಗದೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts