More

    ಬೆಟ್ಟಿಂಗ್‌ ಚಟ: ಆನ್​ಲೈನ್​ ಆ್ಯಪ್​ ಸಾಲ ತೀರಿಸಲಾಗದೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ!

    ತೆಲಂಗಾಣ: ತ್ವರಿತವಾಗಿ ಮತ್ತು ಯಾವುದೇ ದಾಖಲೆ ಇಲ್ಲದೆ ಲೋನ್‌ ಕೊಡುತ್ತೇವೆ ಎಂದು ನಂಬಿಸಿ ಬಳಿಕ ಚಿತ್ರಹಿಂಸೆ ನೀಡುವ ಲೋನ್‌ ಆ್ಯಪ್‌ಗಳು ಮತ್ತೊಮ್ಮೆ ಸುದ್ದಿ ಮಾಡುತ್ತಿವೆ. ಇವುಗಳಿಂದ ಲೋನ್‌ ಪಡೆದು, ಚಿತ್ರಹಿಂಸೆಯನ್ನು ಸಹಿಸಲಾರದೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

    ಇದನ್ನೂ ಓದಿ:ಲೋಕ ಸಮರ: ದೆಹಲಿ, ಹರಿಯಾಣದಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಎಎಪಿ!

    20 ವರ್ಷದ ವಿದ್ಯಾರ್ಥಿ ಹೈದರಾಬಾದ್‌ನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೊತ್ತಕ್ಕೆ ಸರಿಯಾಗಿ ಇಎಂಐ ಪಾವತಿಸಿಲ್ಲ. ಅದರೊಂದಿಗೆ ಆ್ಯಪ್ ನ ಏಜೆಂಟ್ ಗಳು ವಿದ್ಯಾರ್ಥಿಯ ಸಂಬಂಧಿಕರಿಗೆ ಕರೆ ಮಾಡಿ ಹಣ ಕೇಳಿದ್ದಾರೆ. ಎಲ್ಲರಿಗೂ ವಿಷಯ ಗೊತ್ತಾಗಿ ಮನನೊಂದ ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ವೈಯಕ್ತಿಕ ಅಗತ್ಯಗಳಿಗಾಗಿ ಆ್ಯಪ್‌ಗಳ ಮೂಲಕ ಲೋನ್‌ ಪಡೆದಿದ್ದ. ಸಾಲ ಪಡೆದಿದ್ದ ಆ್ಯಪ್‌ಗಳು ಕಳೆದ ಕೆಲವು ಸಮಯದಿಂದ ಹಣ ಮರುಪಾವತಿಗೆ ಬೆನ್ನು ಬಿದ್ದಿದ್ದವು. ಆದರೆ, ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಹಣ ಪಡೆದ ಬಳಿಕ ಸಾಕಷ್ಟು ಬಾರಿ ಮರುಪಾವತಿ ಮಾಡಿದ್ದರೂ ಲೋನ್‌ ಮುಗಿಯುತ್ತಲೇ ಇರಲಿಲ್ಲ. ಹೀಗಾಗಿ ಕೆಲವು ತಿಂಗಳಿನಿಂದ ಕಟ್ಟಲಾಗಿರಲಿಲ್ಲ. ಇದರಿಂದ ಈ ಆ್ಯಪ್‌ಗಳ ಕಡೆಯಿಂದ ಚಿತ್ರಹಿಂಸೆ ಆರಂಭವಾಗಿತ್ತು.

    ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ವಿದ್ಯಾರ್ಥಿಯು ಆನ್‌ಲೈನ್ ಸಾಲದ ಅಪ್ಲಿಕೇಶನ್‌ನ ಹೊರತಾಗಿ ತನ್ನ ಸ್ನೇಹಿತರು ಮತ್ತು ಕಾಲೇಜಿನ ಇತರ ವಿದ್ಯಾರ್ಥಿಗಳಿಂದ ಸಾಲ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆನ್‌ಲೈನ್ ಆಟಗಳನ್ನು ಆಡುವ ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಹಣಕಾಸಿನ ಸಾಲಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ತಂದೆ ಹೇಳಿದ ಪ್ರಕಾರ ಸಾಲದ ಮೊತ್ತದಲ್ಲಿ 3 ಲಕ್ಷ ರೂ. ಮರುಪಾವತಿ ಮಾಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಲೋನ್‌ ಆ್ಯಪ್‌ಗಳ ಬಗ್ಗೆ ಎಚ್ಚರವಿರಲಿ: ದೇಶದಲ್ಲಿ ಸುಲಭದಲ್ಲಿ ಲೋನ್‌ ಕೊಡುತ್ತೇವೆ ಎಂದು ನಂಬಿಸಿ ನಂತರ ಸಾಲದ ಸುಳಿಯಲ್ಲಿ ಕೆಡಹುವ ಆ್ಯಪ್‌ಗಳು ಬಹಳಷ್ಟು ಸಂಖ್ಯೆಯಲ್ಲಿವೆ. ಕೇಂದ್ರ ಸರ್ಕಾರ ಹಿಂದೆ ಹಲವು ಆ್ಯಪ್​ಗಳನ್ನು ನಿಷೇಧಿಸಿತ್ತು. ಇವುಗಳಲ್ಲಿ ಕೆಲವು ವಿದೇಶದಿಂದ ಕಾರ್ಯಾಚರಿಸುತ್ತಿದ್ದರೆ ಇನ್ನು ಕೆಲವು ನಾನಾ ರಾಜ್ಯಗಳಿಂದ ಕಾರ್ಯಾಚರಿಸುತ್ತಿವೆ. ಇವುಗಳು ಸುಲಭದಲ್ಲಿ, ಒಂದೇ ಕ್ಲಿಕ್‌ನಲ್ಲಿ ಸಾಲ ನೀಡಿ ನಂತರ ಚಿತ್ರಹಿಂಸೆ ನೀಡಿ ಹತ್ತಾರುಪಟ್ಟು ವಸೂಲು ಮಾಡುವುದು ಇವುಗಳ ಕಾರ್ಯತಂತ್ರ. ಇವುಗಳಿಗೆ ಬಲಿಯಾಗಿ ಅದೆಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಎಷ್ಟೇ ಕಷ್ಟವಾದರೂ ರಾಷ್ಟ್ರೀಕೃತ ಬ್ಯಾಂಕ್‌ ಇಲ್ಲವೇ ನಂಬಲರ್ಹ ಸಹಕಾರ ಮತ್ತಿತರ ಸ್ಥಳೀಯ ಬ್ಯಾಂಕ್‌ಗಳಿಂದೇ ಲೋನ್‌ ಪಡೆಯುವುದು ಉತ್ತಮ ಎನ್ನುವುದು ತಜ್ಞರು ನೀಡುವ ಸಲಹೆ.

    ಲೋಕ ಸಮರ: ದೆಹಲಿ, ಹರಿಯಾಣದಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಎಎಪಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts