More

    ರಾಮಮಂದಿರ ಉದ್ಘಾಟನೆ; ರಾಮಲಲ್ಲಾನನ್ನು ಸ್ವತಃ ಹೊತ್ತು ತರಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ 2024ರ ಜನವರಿ 22ರಂದು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ರಾಮಲಲ್ಲಾನ ಮೂರ್ತಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೊತ್ತು ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಕೂಗಳತೆ ದೂರದಲ್ಲಿರುವ ದೇವಾಲಯದಲ್ಲಿ ರಾಮಲಲ್ಲಾನ ವಿಗ್ರಹವನ್ನು ಇರಿಸಲಾಗಿದೆ.  ಈ ಮೂರ್ತಿಯನ್ನು ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದವರೆಗೂ ಪ್ರಧಾನಿ ಮೋದಿ ಅವರು ಕಾಲ್ನಡಿಗೆ ಮೂಲಕ ತಂದು ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

    ಪ್ರಧಾನಿಗೆ ಸಾಥ್​ ನೀಡಲಿದ್ದಾರೆ ಗಣ್ಯರು

    ಶ್ರೀ ರಾಮ ಜನ್ಮಭೂಮಿ ಟ್ರಸ್ಟ್​ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವವನ್ನು ನೀಡಲು ತೀರ್ಮಾನಿಸಿದ್ದು, ಪ್ರಧಾನಿ ಮೋದಿ ಅವರೇ ಸ್ವತಃ ರಾಮಲಲ್ಲಾನ ವಿಗ್ರಹವನ್ನು ಗರ್ಭಗುಡಿವರೆಗೆ ಹೊತ್ತು ತಂದು ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ರಾಮಲಲ್ಲಾ ವಿಗ್ರಹವನ್ನು 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತ ಶಿಲೆಯ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಲಾಗುವುದು.

    ರಾಮಲಲ್ಲಾ ಮೂರ್ತಿಯನ್ನು ಹೊತ್ತು ಸಾಗುವ ಪ್ರಧಾನಿ ಮೋದಿ ಅವರಿಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಾಥ್​ ನೀಡಲಿದ್ದಾರೆ. ಇನ್ನು ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂಜಾ ಕೈಂಕರ್ಯಗಳ ನೇತೃತ್ವವನ್ನೂ ಪ್ರಧಾನಿ ಮೋದಿ ಅವರೇ ವಹಿಸಲಿದ್ದಾರೆ. ಮೋದಿ ಅವರ ಮೂಲಕವೇ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ ಎಂದು ವರದಿಯಾಗಿದೆ.

    PM Narendra Modi

    2024ರ ಜನವರಿ 22ರಂದು ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 11:30ರಿಂದ 12:30ರ ಒಳಗೆ ಸಲ್ಲುವ ಶುಭಲಗ್ನದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಒಪನೆ ಸಮಯದಲ್ಲಿ ದೇಶದ ಉದ್ದಗಲಕ್ಕೂ ಇರುವ ಸಾಧು ಹಾಗೂ ಸಂತರು ಭಾಗಿಯಾಗಲಿದ್ದಾರೆ. ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

    ಇದನ್ನೂ ಓದಿ: ಬೌಲರ್​ಗಳ ಮಿಂಚಿನ ದಾಳಿಗೆ ತತ್ತರಿಸಿದ ಸಿಂಹಳಿಯರು; ಭಾರತಕ್ಕೆ ಶ್ರೀಲಂಕಾ ವಿರುದ್ಧ 302 ರನ್​ಗಳ ಭರ್ಜರಿ ಜಯ

    ಮೂರು ಮೂರ್ತಿಗಳನ್ನು ಸಿದ್ದಪಡಿಸಲು ಆದೇಶ

    ರಾಮ ಜನ್ಮಭೂಮಿ ಟ್ರಸ್ಟ್​ನ ಆದೇಶದ ಪ್ರಕಾರ ರಾಮಲಲ್ಲಾನ ವಿಗ್ರಹದೊಂದಿಗೆ ಮೂರು ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದ್ದು,  ಅವುಗಳ ಪೈಕಿ ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿದು ಬಂದಿದೆ. ಈ ಮೂಲಕ ಅಚಲ ಮೂರ್ತಿ ಹಾಗೂ ಚಲ ಮೂರ್ತಿ ಎಂದು ಹೆಸರಿಸಲಾಗಿದೆ.

    ಚಲಮೂರ್ತಿಯಾದ ರಾಮಲಲ್ಲಾನ ವಿಗ್ರಹದ ಜತೆಗೆ ಗರ್ಭಗುಡಿಯಲ್ಲಿ ಶಾಶ್ವತವಾಗಿ ನೆಲೆಗೊಳಿಸಲು ಅಚಲ ಮೂರ್ತಿ ಒಂದನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಟ್ರಸ್ಟ್​ ಈಗಾಗಲೇ ಮೂರು ಮೂರ್ತಿಗಳನ್ನು ಸಿದ್ದಪಡಿಸಲು ಆದೇಶಿಸಿದ್ದು, ಈ ಮೂರರ ಪೈಕಿ ಒಂದನ್ನು ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಅಚಲ ಮೂರ್ತಿಯನ್ನಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts