More

    ಉತ್ತರಪ್ರದೇಶ: 10 ಸಾವಿರ ಕೋಟಿ ಮೊತ್ತದ 15 ವಿಮಾನಯಾನ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ!

    ಉತ್ತರಪ್ರದೇಶ:  ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಪ್ರಧಾನಿ ಮೋದಿ, ಭಾನುವಾರ 15 ವಿಮಾನ ನಿಲ್ದಾಣ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕೆಲವು ಹೊಸ ವಿಮಾನ ನಿಲ್ದಾಣಗಳು, ಹೊಸ ಹಾಗೂ ವಿಸ್ತರಿತ ಟರ್ಮಿನಲ್‌ಗಳು, ನೂತನ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗಳು ಸೇರಿವೆ.

    ಇದನ್ನೂ ಓದಿ: ಐಪಿಎಲ್‌ 2024 ಟೂರ್ನಿಯಲ್ಲೂ ರಿಷಭ್ ಪಂತ್‌ ಆಡುವುದು ಅನುಮಾನ? ಕಾರಣ ಹೀಗಿದೆ!

    ಮೋದಿ ಚಾಲನೆ ನೀಡಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳಲ್ಲಿ ಅಜಂಗಢ, ಶ್ರಾವಸ್ತಿ, ಮೊರಾದಾಬಾದ್, ಚಿತ್ರಕೂಟ ಮತ್ತು ಅಲಿಗಢ್ ವಿಮಾನ ನಿಲ್ದಾಣಗಳು ಸೇರಿವೆ. ಇದಲ್ಲದೇ ಲಖನೌದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟಿಸಿದರು.

    ಒಟ್ಟು 10 ಸಾವಿರ ಕೋಟಿ ರೂಪಾಯಿ ಮೊತ್ತದ ಬೃಹತ್ ಯೋಜನೆಗಳು ಇದಾಗಿದ್ದು, ಭಾರತ ದೇಶದ ವಿಮಾನ ಯಾನ ರಂಗದ ಇತಿಹಾಸದಲ್ಲೇ ಒಂದೇ ದಿನ ಚಾಲನೆ ಸಿಗುತ್ತಿರುವ ಅತಿ ದೊಡ್ಡ ಯೋಜನೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡುತ್ತಿರುವ ಪ್ರಧಾನಿ ಮೋದಿ, ಭಾನುವಾರ ವಿಮಾನ ಯಾನ ರಂಗಕ್ಕೆ ನೀಡುತ್ತಿರುವ ಕೊಡುಗೆಯನ್ನು ‘ಏವಿಯೇಷನ್ ಸೂಪರ್ ಸಂಡೇ’ ಎಂದೇ ಬಣ್ಣಿಸಲಾಗಿದೆ.

    ಇದರ ಜೊತೆಗೆ, ಅಜಂಗಢ, ಶ್ರಾವಸ್ತಿ, ಮೊರಾದಾಬಾದ್, ಚಿತ್ರಕೂಟ, ಅಲಿಗಢ, ಜಬಲ್ಪುರ್, ಗ್ವಾಲಿಯರ್, ಲಕ್ನೋ, ಪುಣೆ, ಕೊಲ್ಲಾಪುರ, ದೆಹಲಿ, ಆದಂಪುರ ಮುಂತಾದ ಅನೇಕ ವಿಮಾನ ನಿಲ್ದಾಣಗಳಲ್ಲಿ ಹೊಸ ಟರ್ಮಿನಲ್​ಗಳಿಗೆ ಚಾಲನೆ ನೀಡಲಾಗಿದೆ.

    ಇದೇ ವೇಳೆ ಅಜಂಗಢದಲ್ಲಿ ಮಹಾರಾಜ ಸುಹೇಲ್‌ದೇವ್ ರಾಜ್ಯ ವಿಶ್ವವಿದ್ಯಾಲಯವನ್ನು ಸಹ ಪ್ರಾರಂಭಿಸಲಾಯಿತು. ಈ ಯೋಜನೆಗಳು ರೈಲು ಮತ್ತು ರಸ್ತೆ ಸೇರಿದಂತೆ ಹಲವು ಯೋಜನೆಗಳನ್ನು ಒಳಗೊಂಡಿವೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವರು ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.

    ಈ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ಜನರನ್ನುದ್ದೇಶಿಸಿ ಮಾತನಾಡಿದರು. ಆಧುನಿಕ ಮೂಲಸೌಕರ್ಯ ಕಾಮಗಾರಿಗಳನ್ನು ಸಣ್ಣ ನಗರಗಳಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಮೋದಿ ಹೇಳಿದರು. ಬೃಹತ್ ಮೆಟ್ರೋ ನಗರಗಳಂತೆ ಸಣ್ಣ ನಗರಗಳೂ ಈ ಅಭಿವೃದ್ಧಿಗೆ ಅರ್ಹವಾಗಿವೆ ಎಂಬುದು ಬಹಿರಂಗವಾಗಿದೆ. ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು. ಇದು ಸಬ್ಕಾ ಸಾಥ್ ಮತ್ತು ಸಬ್ಕಾ ವಿಕಾಸ್‌ಗೆ ಸಾಕ್ಷಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದು ಡಬಲ್ ಎಂಜಿನ್ ಸರ್ಕಾರದ ಮೂಲ ಮಂತ್ರವಾಗಿದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವುದೇ ನಮ್ಮ ಸರ್ಕಾರದಲ್ಲಿ ಮುಖ್ಯ. ಅಜಂಗಢ ಮಾತ್ರವಲ್ಲದೆ ಇಡೀ ದೇಶದ ಅಭಿವೃದ್ಧಿಗಾಗಿ ಇಲ್ಲಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತಿದೆ. ಈ ಕ್ರಮದಲ್ಲಿ ಇಂದು ದೇಶದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಐಪಿಎಲ್‌ 2024 ಟೂರ್ನಿಯಲ್ಲೂ ರಿಷಭ್ ಪಂತ್‌ ಆಡುವುದು ಅನುಮಾನ? ಕಾರಣ ಹೀಗಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts