More

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬಂಡೀಪುರಕ್ಕೆ ಬಂದಿದ್ದು, ಅವರ ಸಫಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿ ಅವರು ಇಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಭೇಟಿ ನೀಡಿದರು. ಬಂಡೀಪುರ ಬಳಿಯ ಮೇಲುಕಾಮನಹಳ್ಳಿಯ ಹೆಲಿಪ್ಯಾಡ್ ಗೆ ಬಂದಿಳಿದ ಬಳಿಕ ಪ್ರಧಾನಿಯವರು ರಸ್ತೆ ಮೂಲಕ ಬಂಡಿಪುರದ ಅರಣ್ಯ ಇಲಾಖೆಯ ಸ್ವಾಗತ ಕೇಂದ್ರಕ್ಕೆ ಆಗಮಿಸಿದರು.ಅಲ್ಲಿಯೇ ಇದ್ದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮಿಸಿ ಬಳಿಕ ಸಫಾರಿಗೆ ತೆರಳಿದರು.

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಒಂದೂವರೆ ತಾಸು ಸಫಾರಿ ನಡೆಸಿದ್ದು 15 ರಿಂದ 18 ಕಿ.ಮೀ ಕಾಡಿನಲ್ಲಿ ಓಡಾಡಿದ್ದಾರೆ.

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಇದನ್ನೂ ಓದಿ: ಮದುವೆ ಮನೆಯ ಡಿಜೆ ನಿಲ್ಲಿಸಿದ ಪೊಲೀಸ್​; ಠಾಣೆ ಎದುರು ಪ್ರತಿಭಟನೆ ಕುಳಿತ ಜೋಡಿ!

    ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಎಂಟ್ರಿ ಕೊಟ್ಟ ಮೋದಿ ಸ್ಟೈಲ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಫಿದಾ ಆಗಿದ್ದಾರೆ. ಬಂಡೀಪುರಕ್ಕೆ ಬರುವ ಮುನ್ನ ಕೈಯಲ್ಲಿ ಜಾಕೆಟ್ ಹಿಡಿದು ಬರುವುದು ಹಾಗೂ ಬೋಳಗುಡ್ಡದಲ್ಲಿ ಬೈನಾಕುಲರ್ ನಲ್ಲಿ ಕಾಡಿನ ವೀಕ್ಷಣೆ, ಹುಲಿ ಚಿತ್ರದ ಜೊತೆ ಫೋಟೋಗೆ ಪೋಸ್​ನ ಸ್ಟೈಲಿಶ್ ಚಿತ್ರಗಳು ವೈರಲ್ ಆಗಿವೆ.

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಸಫಾರಿಯನ್ನು ಓಪನ್ ಜೀಪ್​​ನಲ್ಲಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಆನೆ, ಜಿಂಕೆ, ಕಡವೆ, ಕಾಡೆಮ್ಮೆ, ಉಡಗಳನ್ನು ನೋಡಿದ್ದಾರೆ ಎಂದು ತಿಳಿದುಬಂದಿದೆ‌‌‌‌. ಇನ್ನು, ಮೋದಿ ಅವರ ಸಫಾರಿ ವಾಹನವನ್ನು ಬಂಡೀಪುರ ಅರಣ್ಯ ಇಲಾಖೆಯ ಚಾಲಕ ಮಧುಸೂದನ್ ಎಂಬವರು ಚಲಾಯಿಸಿದ್ದರು.

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಇದನ್ನೂ ಓದಿ: ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕರೊನಾ!

    ಚಾಮರಾಜನಗರ ಜಿಲ್ಲೆಯ ಸಮೀಪದಲ್ಲೇ ಇರುವ ತಮಿಳುನಾಡಿನ ಮಧುಮಲೈ ಅರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ‌‌ ಪ್ರಧಾನ ಮಂತ್ರಿ ನರೇಂದ್ರ‌ಮೋದಿ ಭೇಟಿ ನೀಡಿದರು‌. ಶಿಬಿರಲ್ಲಿ ಸಾಕಿರುವ ಆನೆಗಳಿಗೆ ಪಿಎಂ ಮೋದಿ ಕಬ್ಬು ತಿನ್ನಿಸಿದರು.

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts