More

    ಸಿಬಿಎಸ್​ಇ ಫಲಿತಾಂಶ: ಅಭಿನಂದನೆ ಸಲ್ಲಿಸಿ…ಆತ್ಮವಿಶ್ವಾಸವನ್ನೂ ತುಂಬಿದ ಪ್ರಧಾನಿ ಮೋದಿ

    ನವದೆಹಲಿ: ಸಿಬಿಎಸ್​ಇ 10 ಮತ್ತು 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ಭವಿಷ್ಯದ ಹೋರಾಟದಲ್ಲಿ ಎಲ್ಲವೂ ಒಳಿತಾಗಲಿ, ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

    ಹಾಗೇ, ಫಲಿತಾಂಶ ಚೆನ್ನಾಗಿ ಬರದೆ, ಬೇಸರದಲ್ಲಿ ಇರುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನೂ ತುಂಬಿದ್ದಾರೆ. ಒಂದು ಪರೀಕ್ಷೆ ನಿಮ್ಮ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ. ನೀವೇನು ಎಂಬುದನ್ನು ಒಂದು ಪರೀಕ್ಷೆ ತೋರಿಸುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದಲ್ಲ ಒಂದು ವಿಷಯದಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಹಾಗಾಗಿ ನೋವು ಬೇಡ ಎಂದು ಮೋದಿಯವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ ಸೂಪರ್ ಸ್ಟಾರ್ ರಜನಿಕಾಂತ್​ ಅವರ ಹೊಸ ರಾಜಕೀಯ ಪಕ್ಷ…

    ಸಿಬಿಎಸ್​ಇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ನನ್ನ ಎಲ್ಲ ಪ್ರೀತಿಯ ವಿದ್ಯಾರ್ಥಿ ಮಿತ್ರರಿಗೆ ಅಭಿನಂದನೆಗಳು. ಭವಿಷ್ಯದಲ್ಲೂ ಒಳಿತಾಗಲಿ. ಹಾಗೇ, ಯಾರಿಗೆ ಸಿಬಿಎಸ್​ಇ 10 ಮತ್ತು 12ನೇ ಫಲಿತಾಂಶದ ಬಗ್ಗೆ ಸಮಾಧಾನ ಇಲ್ಲವೋ, ಉತ್ತಮವಾಗಿ ರಿಸಲ್ಟ್​ ಬರಲಿಲ್ಲವೋ ಅಂಥವರು ಬೇಸರಪಟ್ಟುಕೊಳ್ಳುವುದು ಬೇಡ. ನಿಮ್ಮಲ್ಲೂ ಪ್ರತಿಭೆ ಇದೆ. ಭರವಸೆ ಕಳೆದುಕೊಳ್ಳದೆ ಮುಂದೆ ಸಾಗಿ. ನೀವು ಒಂದು ಅದ್ಭುತವನ್ನು ಸಾಧಿಸಬಲ್ಲಿರಿ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.

    ಸಿಬಿಎಸ್​ಇ 10ನೇ ತರಗತಿ ರಿಸಲ್ಟ್ ಇಂದು ಪ್ರಕಟವಾಗಿದ್ದು, ಶೇ.91.46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೇ 12ನೇ ತರಗತಿ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, ಶೇ.88.78 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.(ಏಜೆನ್ಸೀಸ್​)

    ‘ಕೊವಿಡ್​-19 ಲಸಿಕೆಯನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಜವಾಬ್ದಾರಿ ರಿಲಯನ್ಸ್​ ಸಂಸ್ಥೆಯದ್ದು…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts