More

    ಪಶ್ಚಿಮ ಬಂಗಾಳಕ್ಕೆ 1 ಸಾವಿರ ಕೋಟಿ ರೂ. ನೆರವು ಘೋಷಿಸಿದ ಪ್ರಧಾನಿ ಮೋದಿ

    ನವದೆಹಲಿ: ಎರಡು ದಿನಗಳ ಹಿಂದೆ ಅಪ್ಪಳಿಸಿದ ಅಂಫಾನ್​ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಪಶ್ಚಿಮ ಬಂಗಾಳದತ್ತ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ ಮುಂಚಾಚಿದ್ದಾರೆ. ಅಂದಾಜು 1 ಸಾವಿರ ಕೋರಿ ರೂ.ಗಳ ನೆರವು ನೀಡುವುದಾಗಿ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಭಾರಿ ಹಾನಿಯಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನಕರ್​ ಮತ್ತು ಸಿಎಂ ಮಮತಾ ಬ್ಯಾನರ್ಜಿ ಜತೆ ಹಾನಿಗೀಡಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಹೆಲಿಕಾಪ್ಟರ್​ನಲ್ಲಿ ತೆರಳಿದ ಮೂವರು ಹಾನಿಗೀಡಾದ ಪ್ರದೇಶಗಳನ್ನು ಅವಲೋಕಿಸಿದರು.

    ಇದನ್ನೂ ಓದಿ: ನಾವ್​ ಮನೀಗ್​ ಹೋಗಾಂಗಿಲ್ಲಾ… ಪಾಕಿಸ್ತಾನ ವಲಸಿಗರ ಹಾಡುಪಾಡು…

    ಅಂಫಾನ್​ ಚಂಡಮಾರುತ ಕೋಲ್ಕತಾ ಸೇರಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಬುಧವಾರ ಅಪ್ಪಳಿಸಿತ್ತು. ಇದರಿಂದಾಗಿ 80 ಮಂದಿ ಮೃತಪಟ್ಟಿದ್ದಲ್ಲದೆ, ಸಾಕಷ್ಟು ಆಸ್ತಿ ಹಾನಿಗೀಡಾಗಿದೆ. ಸಹಸ್ರಾರು ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಮರಗಳು ಮತ್ತು ವಿದ್ಯುತ್​ ಕಂಬಗಳು ಬುಡಮೇಲಾಗಿ ಬಿದ್ದಿವೆ. ಇವೆಲ್ಲವನ್ನೂ ಪ್ರಧಾನಿ ಮೋದಿ ವೀಕ್ಷಿಸಿದರು.

    ಇದಕ್ಕೂ ಮುನ್ನ ಸರಣಿ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ಪಶ್ಚಿಮ ಬಂಗಾಳದ ಜತೆಗಿದೆ ಎಂದು ಹೇಳಿದ್ದರು. ಚಂಡಮಾರುತದಿಂದ ತೊಂದರೆಗೀಡಾದವರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲಾಗುವುದು. ಇದರಿಂದ ಹಿಂದೆಸರಿಯುವ ಮಾತಿಲ್ಲ ಎಂದು ತಿಳಿಸಿದ್ದರು.

    ರಿಲಯನ್ಸ್​ ಜಿಯೋ ಪ್ಲಾಟ್​ಫಾರಂನಲ್ಲಿ ಕೆಕೆಆರ್​ನಿಂದ 11,367 ಕೋಟಿ ರೂ. ಹೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts