More

    ಅನ್ನದಾತರಿಗೆ ಆರ್ಥಿಕ ಬಲ; ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    ನವದೆಹಲಿ: ಆತ್ಮನಿರ್ಭರ ಭಾರತ ಅಭಿಯಾನ ಘೋಷಣೆಯಡಿ ಕಳೆದ ಮೇನಲ್ಲಿ ಪ್ರಕಟಿಸಿದ್ದ ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. 1 ಲಕ್ಷ ಕೋಟಿ ರೂ. ನಿಧಿಯೊಂದಿಗೆ ಆರಂಭವಾಗಿರುವ ಯೋಜನೆಯ ಮೊದಲ ಕಂತಿನಲ್ಲಿ 2,280 ರೈತರ ಸೊಸೈಟಿಗಳಿಗೆ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಸಾಲದ ನೆರವನ್ನು ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

    ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ಬೇಸಾಯಗಾರರು ಮತ್ತು ಕೃಷಿಕರ ಸೊಸೈಟಿಗಳು ಈ ನೆರವನ್ನು ಸದುದ್ದೇಶಕ್ಕೆ ಸಮರ್ಥವಾಗಿ ಬಳಸಿಕೊಳ್ಳುತ್ತವೆ ಎಂಬ ವಿಶ್ವಾಸ ಇದೆ. ಈ ನಿಧಿಯ ನೆರವಿನಿಂದ ರೈತರ ಆರ್ಥಿಕ ಸ್ಥಿತಿ ವೃದ್ಧಿಸುತ್ತದೆ. ತನ್ಮೂಲಕ ಕೃಷಿ ವಲಯ ಅಭಿವೃದ್ಧಿಯಾಗಿ ಭಾರತವು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದರು. ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ದೇಶದ ವಿವಿಧ ಭಾಗಗಳಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

    ಯೋಜನೆಯ ಉದ್ದೇಶ

    • ಕೊಯ್ಲೋತ್ತರ ಫಸಲು ನಿರ್ವಹಣೆಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಿಕೊಳ್ಳುವ ಕೃಷಿಕರು, ಕೃಷಿಕರ ಪ್ರಾಥಮಿಕ ಸಹಕಾರ ಸಂಘಗಳು, ಸ್ವಸಹಾಯ ಗುಂಪುಗಳು, ಜಂಟಿ ಸಹಕಾರ ಸಂಘಗಳು, ವಿವಿಧೋದ್ದೇಶ ಸಹಕಾರ ಸೊಸೈಟಿಗಳು, ಕೃಷಿ ಆಧಾರಿತ ಉದ್ದಿಮೆಗಳು, ಸ್ಟಾರ್ಟಪ್​ಗಳಿಗೆ ಸಾಲದ ನೆರವು ಸಿಗಲಿದೆ.
    • ಸಮುದಾಯ ಆಧಾರಿತ ಕೃಷಿ, ಶೈತ್ಯಾಗಾರ ನಿರ್ವಣ, ಗೋದಾಮು ನಿರ್ವಣ, ಆಹಾರ ಸಂಸ್ಕರಣ ಘಟಕ ಸ್ಥಾಪನೆ ಅಥವಾ ವಿಸ್ತರಣೆಗೂ ಧನಸಹಾಯ.
    • ರೈತರು ತಮ್ಮ ಬೆಳೆಯನ್ನು ಗೋದಾಮು, ಶೈತ್ಯಾಗಾರಗಳಲ್ಲಿ ಇರಿಸಿ ಮಾರುಕಟ್ಟೆಯಲ್ಲಿ ಉತ್ತಮ ದರ ಬಂದಾಗ ಮಾರಾಟ ಮಾಡಿ ನಷ್ಟವಾಗುವುದನ್ನು ತಪ್ಪಿಸಬಹುದು.
    • ಗೋದಾಮಿನಲ್ಲಿ ಸಂಗ್ರಹಿಸುವ ಮೂಲಕ ಫಸಲು ಹಾಳಾಗುವುದನ್ನು ತಡೆಯಬಹುದು, ಸಂಸ್ಕರಣೆ ಮಾಡಿ ಬೆಳೆಯ ಮೌಲ್ಯ ವೃದ್ಧಿಸಬಹುದು.
    • ಈ ಯೋಜನೆಯಡಿ ಪಡೆದ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 3ಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ.
    • ಸಿಜಿಟಿಎಂಎಸ್​ಇ ಅಡಿಯಲ್ಲಿ ಕ್ರೆಡಿಟ್ ಗ್ಯಾರಂಟಿ ದೊರೆಯಲಿದೆ.

    ಜೈಲುಪಾಲಾಗಿದ್ದರು ಇನ್ಫೋಸಿಸ್​ ನಾರಾಯಣ ಮೂರ್ತಿ; ವಿದೇಶದಲ್ಲಿ 5 ದಿನ ಅನ್ನಾಹಾರವಿಲ್ಲದೇ ಕಳೆದಿದ್ದರು….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts