More

    ಪ್ರಧಾನಿ ಮೋದಿಯಿಂದ ಚೀನಾ, ಪಾಕ್​​ ಜತೆಗಿನ ಯುದ್ಧ ದಿನಾಂಕ ಈಗಾಗಲೇ ನಿರ್ಧಾರ: ಬಿಜೆಪಿ ಮುಖಂಡನ ಹೇಳಿಕೆ

    ಬಲಿಯಾ: ಗಡಿಯಲ್ಲಿ ನಿರಂತರ ಕ್ಯಾತೆ ತೆಗೆಯುತ್ತಿರುವ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಯಾವಾಗ ಯುದ್ಧ ನಡೆಯಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್​ ಸಿಂಗ್​ ನೀಡಿರುವ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.

    ಪ್ರಧಾನಿ ಮೋದಿಯಿಂದ ಚೀನಾ, ಪಾಕ್​​ ಜತೆಗಿನ ಯುದ್ಧ ದಿನಾಂಕ ಈಗಾಗಲೇ ನಿರ್ಧಾರ: ಬಿಜೆಪಿ ಮುಖಂಡನ ಹೇಳಿಕೆ
    ಸ್ವತಂತ್ರ ದೇವ್​ ಸಿಂಗ್​

    ಈಗಾಗಲೇ ಚೀನಾ ಮತ್ತು ಭಾರತ ನಡುವಿನ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ವಿಘ್ನ ಪರಿಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಶುಕ್ರವಾರ ದೇವ್​ ಸಿಂಗ್​ ಈ ಹೇಳಿಕೆ ನೀಡಿರುವುದು ಭಾರಿ ಚರ್ಚೆ ಹುಟ್ಟು ಹಾಕಿದೆ.

    ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಸಂವಿಧಾನ 370 ಆರ್ಟಿಕಲ್​ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಷಯಕ್ಕೂ ತಮ್ಮ ಹೇಳಿಕೆಯನ್ನು ಲಿಂಕ್​ ಮಾಡಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಕಾಳಿ ಮಾತೆಯನ್ನು ಒಲಿಸೋದಕ್ಕಾಗಿ ನಾಲಿಗೆಯನ್ನೇ ಕತ್ತರಿಸಿ ಪೂಜೆಗಿಟ್ಟ!

    ರಾಮಮಂದಿರ ಮತ್ತು ಆರ್ಟಿಕಲ್​ 370 ವಿಚಾರದಲ್ಲಿ ಪ್ರಧಾನಿ ಕೈಗೊಂಡ ನಿರ್ಧಾರದಂತೆ ಚೀನಾ ಮತ್ತು ಪಾಕಿಸ್ತಾನದ ಜತೆ ಯಾವಾಗ ಯುದ್ಧ ನಡೆಯಬೇಕೆಂಬುದನ್ನು ಪ್ರಧಾನಿ ಮೋದಿ ಈಗಾಗಲೇ ನಿರ್ಧರಿಸಿದ್ದಾರೆ. ದಿನಾಂಕವೂ ಸಹ ನಿರ್ಧಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ದೇವ್​ ಸಿಂಗ್​ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಜಯ್​ ಯಾದವ್​ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗಿ ದೇವ್​ ಸಿಂಗ್​ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಇದೇ ವೇಳೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರನ್ನು ಉಗ್ರರಿಗೆ ಹೋಲಿಸಿದರು.

    ಇನ್ನು ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಚೀನಾದೊಂದಿಗಿನ ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲು ಭಾರತ ಬಯಸಿದೆ. ನಮ್ಮ ಒಂದು ಇಂಚು ಭೂಮಿಯನ್ನು ಸಹ ಯಾರೊಬ್ಬರೂ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್​)

    ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ಕಾಲ್​ ರೆಕಾರ್ಡ್ಸ್​ನಲ್ಲಿ ಸ್ಫೋಟಕ ಮಾಹಿತಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts