More

    ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಂಡ ನಂತರ ಮಮತಾ ಬ್ಯಾನರ್ಜಿ ತಮ್ಮನ್ನೂ ಶಿಕ್ಷಿಸಿಕೊಳ್ಳುತ್ತಾರಾ..?; ಕೋಲ್ಕತ್ತ ಬಿಜೆಪಿ ಪ್ರಶ್ನೆ

    ಕೋಲ್ಕತ್ತ: ಕಾರ್ಯಕ್ರಮವೊಂದರಲ್ಲಿ ಭಾರತೀಯ ಜನತಾ ಪಕ್ಷದ ಬಂಗಾಳ ಘಟಕದ ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಂಡ ತೃಣಮೂಲ ಕಾಂಗ್ರೆಸ್​ನ (ಟಿಎಂಸಿ) ಇಬ್ಬರು ಹಿರಿಯ ನಾಯಕರ ವಿರುದ್ಧ ತೆಗೆದುಕೊಂಡ ಶಿಸ್ತು ಕ್ರಮ ಭಾರಿ ಸುದ್ದಿಗೆ ಗ್ರಾಸವಾಗಿದೆ.

    ಟಿಎಂಸಿ ಶಾಸಕ ಸಮರೇಶ್​ ದಾಸ್​​, ಬ್ಲಾಕ್​ ಅಧ್ಯಕ್ಷ ಸಿದ್ದೇಶ್ವರ ಬೇರ ಅವರು ಬಿಜೆಪಿ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್​ ಘೋಷ್​ ಜತೆಗೆ ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮ ನಡೆದ ಒಂದು ಗಂಟೆಯಲ್ಲಿ ಸಿದ್ದೇಶ್ವರ ಬೇರ ಅವರನ್ನು ಪಕ್ಷದಿಂದ ಉಚ್ಛಾಟಿಸಿ, ನೋಟಿಸ್​ ನೀಡಲಾಗಿದೆ.

    ಆದರೆ ಜನವರಿ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಿಗದಿಯಾಗಿದೆ. ಕೋಲ್ಕತ್ತ ಕೋಟೆಯ 150ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಜನವರಿ 10ರಂದೇ ತೆರಳಲಿರುವ ಪ್ರಧಾನಿ ಅಲ್ಲಿನ ರಾಜ ಭವನದಲ್ಲಿ ವಾಸ್ತವ್ಯ ಹೂಡಲಿದ್ದರೆ.

    ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರೂ ಇದೆ. ಹಾಗಾಗಿ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಬಳಿಕ ಮಮತಾ ಅವರು ತಮ್ಮ ಬಗ್ಗೆಯೇ ಕ್ರಮ ಕೈಗೊಳ್ಳಲಿದ್ದಾರೆಯೆ ಎಂದು ಬಿಜೆಪಿ ಪ್ರಶ್ನಿಸಿದೆ.

    ಈ ಕಾರ್ಯಕ್ರಮ ಸಾಮಾಜಿಕವಾಗಿದ್ದು, ರಾಜಕೀಯ ಸಭೆ ಅಲ್ಲ. ಇದರಲ್ಲಿ ಸ್ಥಳಿಯ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. 2011ರ ಚುನಾವಣೆ ಫಲಿತಾಂಶದ ಭಯ ಈಗಲೂ ಮಮತಾ ಅವರಿಗಿದೆ. ಹಾಗಾಗಿ ಭಯ ಪಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಾಂತನ್​ ಬಸು ಪ್ರಶ್ನಿಸುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts