More

    ಜಮ್ಮು ಕಾಶ್ಮೀರ ಮಾಜಿ ಸಿಎಂ ಉಮರ್​ ಅಬ್ದುಲ್ಲಾರನ್ನು ಕೊಂಡಾಡಿದ ಪ್ರಧಾನಿ ಮೋದಿ!

    ಶ್ರೀನಗರ: ಭಾನುವಾರ ರಾತ್ರಿ ತಮ್ಮ ಅಂಕಲ್​ ನಿಧನರಾದ ಸುದ್ದಿಯನ್ನು ಶೇರ್​ ಮಾಡಿಕೊಂಡು ಕರೊನಾ ವೈರಸ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಮಂದಿ ಪಾಲ್ಗೊಳ್ಳಬೇಡಿ ಎಂದು ಟ್ವೀಟ್​ ಮೂಲಕ ಮನವಿ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್​ ಕಾನ್ಫರೆನ್ಸ್​ ಲೀಡರ್​ ಉಮರ್​ ಅಬ್ದುಲ್ಲಾರನ್ನು ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ.

    ನಿನ್ನೆ ರಾತ್ರಿ ಟ್ವೀಟ್​ ಮಾಡಿದ್ದ ಉಮರ್​ ಅಬ್ದುಲ್ಲಾ, ನನ್ನ ಅಂಕಲ್​ ಡಾ. ಮೊಹದ್​ ಅಲಿ ಮಟ್ಟೂ ದೀರ್ಘಕಾಲಿಕ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಮಂದಿ ಪಾಲ್ಗೊಳ್ಳದೇ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಸಂಕಷ್ಟ ಸಮಯದಲ್ಲೂ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಮನೆಯಿಂದಲೇ ಸಲ್ಲಿಸುವ ನಿಮ್ಮ ಪಾರ್ಥನೆ ಅವರಿಗೆ ಶಾಂತಿಯನ್ನು ನೀಡುತ್ತದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ 50 ವರ್ಷದ ಅಬ್ದುಲ್ಲಾ ವಿನಂತಿಸಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಆರಂಭದಲ್ಲಿ ಅಬ್ದುಲ್ಲಾ ಅಂಕಲ್​ ಸಾವಿಗೆ ಸಂತಾಪ ಸೂಚಿಸಿ, ಇಡೀ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಬಳಿಕ ಇಂತಹ ಸಂಕಷ್ಟದ ಸಮಯದಲ್ಲೂ ಜನರ ಆರೋಗ್ಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎನ್ನುವ ನೀವು ಮೆಚ್ಚುಗೆ ಪಾತ್ರರು, ನಿಮ್ಮ ಮಾತು ಕರೊನಾ ವಿರುದ್ಧದ ಭಾರತ ಹೋರಾಟವನ್ನು ಬಲಗೊಳಿಸುತ್ತದೆ ಎಂದಿದ್ದಾರೆ.

    ಪ್ರಧಾನಿ ಟ್ವೀಟ್​ಗೆ ಉತ್ತರಿಸಿರುವ ಅಬ್ದುಲ್ಲಾ, ನಿಮ್ಮ ಸಾಂತ್ವನ ಸಂದೇಶಕ್ಕೆ ಧನ್ಯವಾದ ಹೇಳಲು ನನ್ನ ಕುಟುಂಬ ನನ್ನೊಂದಿಗೆ ಸೇರಿದೆ. ಅಗಲಿದ ನಮ್ಮ ಅಂಕಲ್​ಗೆ ನಿಮ್ಮ ಪಾರ್ಥನೆ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

    ಪ್ರಧಾನಿ ಮೋದಿ ಕರೆಯಂತೆ ಏಪ್ರಿಲ್​ 14ರವರೆಗೆ 21 ದಿನಗಳ ಕಾಲ ಭಾರತ ಲಾಕ್​ಡೌನ್​ನಲ್ಲಿ ಇರಲಿದೆ. ಕರೊನಾ ತೊಲಗಿಸಲು ಸಾಮಾಜಿಕ ಅಂತರವೊಂದೇ ದಾರಿಯಾಗಿರುವುದರಿಂದ ಈ ಕ್ರಮವನ್ನು ಅನುಸರಿಸಲಾಗಿದೆ. ಇನ್ನು ದೇಶದಲ್ಲಿ ಈವರೆಗೆ 29 ಮಂದಿ ಸಾವಿಗೀಡಾಗಿದ್ದು, 1071 ಸೋಂಕಿತರ ಪ್ರಕರಣ ವರದಿಯಾಗಿದೆ. (ಏಜೆನ್ಸೀಸ್​)

    2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕರೊನಾ ಸೋಂಕು: ಕಾರಣ ಕೇಳಿದ್ರೆ ದಂಗಾಗ್ತೀರಾ!

    ಕರೊನಾ ಸೋಂಕಿನ ಶಂಕೆಯಲ್ಲಿ ಕ್ವಾರಂಟೇನ್‌ನಲ್ಲಿದ್ದೀರಾ? ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts