More

    ನಮ್ಮನ್ನು ನಮ್ಮೂರಿಗೆ ಕಳುಹಿಸಿ ಕೊಡಿ; ಕಾರ್ಮಿಕರ ಅಳಲು

    ಬೆಂಗಳೂರು: ತಮ್ಮನ್ನು ತಮ್ಮೂರಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದರು.

    ನೂರಾರು ಸಂಖ್ಯೆಯಲ್ಲಿ ಇರುವ ಇವರು ಸದ್ಯ ಪೀಣ್ಯದ ಅಪಾರ್ಟ್​ಮೆಂಟ್​ ಬಳಿ ಇದ್ದಾರೆ. ಅಲ್ಲಿ ತಮಗೆ ಸರಿಯಾಗಿ ಊಟ, ತಿಂಡಿ ಸಿಗುತ್ತಿಲ್ಲ. ಶೌಚಗೃಹದ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ದೆಹಲಿಯಲ್ಲಿ ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಭೂಕಂಪ

    ಲಾಕ್​ಡೌನ್​ನಿಂದಾಗಿ ಗುತ್ತಿಗೆದಾರರು ನಮಗೆ ಸರಿಯಾಗಿ ಸಂಬಳವನ್ನೂ ಕೊಡುತ್ತಿಲ್ಲ. ಹೀಗಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ತಮ್ಮ ಊರುಗಳಿಗೆ ಕಳುಹಿಸಿಕೊಟ್ಟರೆ ಒಪ್ಪೊತ್ತಿನ ಊಟವಾದರೂ ಮಾಡಿಕೊಂಡು ಬದುಕುತ್ತೇವೆ ಎಂದು ಆಗ್ರಹಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಬಂದ ಪೀಣ್ಯ ಪೊಲೀಸರು ಪ್ರತಿಭಟನಾಕಾರರ ಅಹವಾಲನ್ನು ಸಾವಕಾಶವಾಗಿ ಆಲಿಸಿದರು. ಬಳಿಕ ಅವರೆಲ್ಲರ ಮನವೊಲಿಸಿ ಪ್ರತಿಭಟನೆ ಸ್ಥಗಿತಗೊಳಿಸುವಂತೆ ಮಾಡಿದ್ದಲ್ಲದೆ, ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿದರು.

    ಸ್ಪಿರುಲಿನಾ ಕರೊನಾಕ್ಕೆ ರಾಮಬಾಣವೆ? ಸಂಶೋಧನಾಲಯ ಏನು ಹೇಳಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts