More

    ಅಂಗಡಿಗಳ ಮೇಲೆ ದಾಳಿ, ಪ್ಲಾಸ್ಟಿಕ್ ವಶ

    ರಬಕವಿ/ಬನಹಟ್ಟಿ: ನಗರಸಭೆ ಅಧಿಕಾರಿಗಳು ಪೌರಾಯುಕ್ತ ಜಗದೀಶ ಈಟಿ ಮಾರ್ಗದರ್ಶನದಲ್ಲಿ ಸ್ಥಳೀಯ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು, ವ್ಯಾಪಾರಸ್ಥರಿಗೆ ದಂಡ ಹಾಕಿದರು.

    ನಗರಸಭೆ ವ್ಯಾಪ್ತಿಯ ವಿವಿಧ ಅಂಗಡಿಕಾರರಿಂದ ಅಧಿಕಾರಿಗಳು ಒಟ್ಟು 150 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು, 8500 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದರು.

    ಪೌರಾಯುಕ್ತ ಜಗದೀಶ ಈಟಿ ಮಾತನಾಡಿ, ರಬಕವಿ-ಬನಹಟ್ಟಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು ವ್ಯಾಪಾರಸ್ಥರು ಅದನ್ನು ಬಳಕೆ ಮಾಡಿದರೆ ದಂಡ ಕೊಡಬೇಕಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯವಾಗಿದೆ. ನಗರಸಭೆ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ನಗರಸಭೆಗೆ ಸಹಕಾರ ನೀಡಬೇಕು. ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ತೊಂದರೆ ಕಂಡು ಬರುತ್ತಿದೆ. ಜತೆಗೆ ಆರೋಗ್ಯವೇ ಭಾಗ್ಯ ಎಂಬಂತೆ ನಮ್ಮ ಆರೋಗ್ಯ ಸುತ್ತಲಿನ ಸ್ವಚ್ಛ ಪರಿಸರ ಅವಲಂಬಿಸಿದೆ. ಆದ್ದರಿಂದ ನಮ್ಮ ಪರಿಸರದ ಬಗ್ಗೆ ನಾವು ತುಂಬಾ ಕಾಳಜಿ ವಹಿಸುವುದು ಮುಖ್ಯ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತೇ ನಮಗೆ ಅವಶ್ಯವಾಗಿದೆ ಎಂದರು.

    ಆರೋಗ್ಯ ನಿರೀಕ್ಷಕ ಶೋಭಾ ಹೊಸಮನಿ, ರಾಜು ಹೊಸೂರ, ಸಂಗೀತಾ ಕೋಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts