More

    ದುಡಿಮೆಯಲ್ಲಿ ದೇವರನ್ನು ಕಾಣಿ

    ಅಳವಂಡಿ: ಮನುಷ್ಯ ಆಲಸ್ಯಿ ಜೀವನ ನಡೆಸಬಾರದು. ಪರಿಶ್ರಮದ ಬದುಕು ಕಟ್ಟಿಕೊಳ್ಳಬೇಕು. ಪರಿಶ್ರಮದಿಂದ ಗಳಿಸಿದ್ದು ಶಾಶ್ವತವಾಗಿ ಉಳಿಯುತ್ತದೆ ಮತ್ತು ಸಮಾಜ ಸದಾ ಗೌರವಹಿಸುತ್ತದೆ ಎಂದು ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    ಗ್ರಾಮದ ಶ್ರೀ ಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಇತ್ತೀಚೆಗೆ ನಡೆದ ಮಾಸಿಕ ಶಿವಾನುಭವ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಕೆಲಸವನ್ನು ದೇವರ ಮೇಲೆ ಹಾಕದೇ ನಾವುಗಳೇ ನಿರ್ವಹಿಸಬೇಕು. ದುಡಿಮೆಯಲ್ಲಿ ದೇವರನ್ನು ಕಾಣಬೇಕು. ಸಮಾಜದಲ್ಲಿ ಇನ್ನೊಬ್ಬರ ಏಳಿಗೆ ಬಯಸುತ್ತಾ ನಾವುಗಳು ಏಳಿಗೆ ಹೊಂದಬೇಕು ಎಂದು ತಿಳಿಸಿದರು.

    ಶಿಕ್ಷಕಿ ಜಯಶ್ರೀ ಶರಣಪ್ಪ ಹಕ್ಕಂಡಿ, ಅಕ್ಕಮಹಾದೇವಿ ವಚನಗಳ ಕುರಿತು ಉಪನ್ಯಾಸ ನೀಡಿದರು. ವಚನಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಸಹಕಾರಿಯಾಗಿವೆ. ಜೀವನಕ್ಕೆ ದಾರಿದೀಪವಾಗಿವೆ ಎಂದರು.

    ನಂತರ ಸಾಧಕರನ್ನು ಸನ್ಮಾನಿಸಲಾಯಿತು. ಸಂಗೀತಕಾರ ರಮೇಶ ಪೂಜಾರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀ ಗುರುಮೂರ್ತಿಸ್ವಾಮಿ ಇನಾಮದಾರ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಶರಣಪ್ಪ ಹಕ್ಕಂಡಿ, ಕಾಂತರಾಜ ಶೆಟ್ಟರ, ವೆಂಕರಡ್ಡಿ ಇಮ್ಮಡಿ, ನಾಗರಾಜ ಗುಡಿ, ರಾಘವೇಂದ್ರ ಅರ್ಕಸಾಲಿ, ಗವಿಸಿದ್ದಪ್ಪ ಮಾಳೆಕೊಪ್ಪ, ಚಿಕ್ಕವೀರಜ್ಜ ಕವಡಿಮಟ್ಟಿ, ಭೀಮರಡ್ಡಿ ಗದ್ದಿಕೇರಿ, ದೇವಪ್ಪ ಕಟ್ಟಿಮನಿ, ಗಿರೀಶ ಕಣವಿ, ರಮೇಶ ಭಾವಿಹಳ್ಳಿ, ಈಶಪ್ಪ ಜೋಳದ, ಅಶೋಕ ಬಂಡಿ, ಶರಣಪ್ಪ ಗದ್ದಿಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts