More

    ರೋಗವಿಲ್ಲದ ಕಾಳುಮೆಣಸು ಬಳ್ಳಿ ನಾಟಿ ಮಾಡಿ

    ಎನ್.ಆರ್.ಪುರ: ಕಾಳುಮೆಣಸು ಬಳ್ಳಿಯನ್ನು ನಾಟಿ ಮಾಡುವ ರೈತರು ರೋಗ ಇಲ್ಲದ ಬಳ್ಳಿ ಆಯ್ಕೆ ಮಾಡಿಕೊಳ್ಳಬೇಕು ಎಂದು ತರೀಕೆರೆ ತಾಲೂಕಿನ ಬಾವಿ ಕೆರೆ ಕೃಷಿ ಮತ್ತು ಸಂಶೋಧನಾ ಕೇಂದ್ರದ ತೋಟಗಾರಿಕ ವಿಜ್ಞಾನಿ ಡಾ.ಸದಾಶಿವ ನಡುಕೇರಿ ಸಲಹೆ ನೀಡಿದರು.
    ತಾಲೂಕಿನ ವಗಡೆ ಗ್ರಾಮದ ರಾಜು ಪೂಜಾರಿ ಎಂಬ ರೈತರ ಜಮೀನಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅಡಕೆ, ಕಾಳು ಮೆಣಸು ಹಾಗೂ ಕಾಫಿ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಕಾಳುಮೆಣಸು ಬೆಳೆ ಬಗ್ಗೆ ಮಾಹಿತಿ ನೀಡಿ, ರೈತರು ನರ್ಸರಿ ಮಾಡುವಾಗ ನೆಲಕ್ಕೆ ಹಬ್ಬದ ಕಾಳು ಮೆಣಸು ಬಳ್ಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಟಿ ಮಾಡುವಾಗ ಕಿರಾಡಿಕ್ಷ್ ಎಂಬ ಪೌಡರ್ ಹಚ್ಚಿ ನಾಟಿ ಮಾಡಬೇಕು.ಮಲೆನಾಡು ಭಾಗಕ್ಕೆ ಪಣಿಯೂರ-1, ಶಕ್ತಿ ಹಾಗೂ ತೇವಮ್ ಎಂಬ ತಳಿ ಸೂಕ್ತವಾಗಿದೆ ಎಂದರು.
    ಶೃಂಗೇರಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಸ್ಯ ರೋಗ ವಿಜ್ಞಾನಿ ಡಾ.ಸಂಜೀವ ಜಕಾತಿಮಠ ಅಡಕೆ ಬೆಳೆ ಬಗ್ಗೆ ಮಾಹಿತಿ ನೀಡಿ, ಎಲೆಚುಕ್ಕಿ ರೋಗದಲ್ಲಿ 3 ರೀತಿಯ ಶಿಲೀಂದ್ರಗಳು ಹೆಚ್ಚಾಗಿ ಕಾಣಿಸಿಕೊಂಡಿದೆ. ಅಡಕೆಗೆ ಬೋರ್ಡೋ ದ್ರಾವಣ ಸಿಂಪರಣೆ ಮಾಡುವಾಗ ಪಿಎಚ್-7 ಇರುವಂತೆ ತಯಾರಿಸಿಕೊಂಡು ಅಡಕೆ ಮರದ ಗರಿಗಳಿಗೂ ಸಿಂಪರಣೆ ಮಾಡಬೇಕು. ಅಡಕೆ ಗಿಡಗಳಿಗೆ ಬೇವಿನ ಹಿಂಡಿ, ಟರ‌್ರಕೋಟರ್ಮಾವನ್ನು ದನದ ಗೊಬ್ಬರ ಜತೆಗೆ ಬೆರಸಿ ಹಾಕಬೇಕು ಎಂದು ಸಲಹೆ ನೀಡಿದರು.
    ಬಾವಿಕೆರೆ ಕೃಷಿ ಮತ್ತು ಸಂಶೋಧನಾ ಕೇದ್ರದ ಕೀಟ ಶಾಸ್ತ್ರಜ್ಞ ಡಾ.ಕೃಷ್ಣರೆಡ್ಡಿ ಅಡಕೆ ಬೇರುಹುಳ, ಕಾಫಿ ಕಾಂಡ ಕೊರೆಯುವ ಕೀಟದ ಬಗ್ಗೆ ಮಾಹಿತಿ ನೀಡಿದರು. ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವೀಚಾರಕ ದಿನೇಶ್, ಬಾವಿಕೆರೆ ಕೃಷಿ ವಿಸ್ತಾರಣಾ ವಿಜ್ಞಾನಿ ಡಾ. ಬಿ.ಮಂಜುನಾಥಕುದರಿ, ಒಕ್ಕೂಟದ ಪದಾಧಿಕಾರಿಗಳಾದ ನಾರಾಯಣ, ಕೈಮರ ಒಕ್ಕೂಟದ ಮೇಲ್ವಿಚಾರಕ ತೀರ್ಥರಾಜ್, ಯೋಗೀಶ, ಮಹೇಶ್, ಸೇವಾ ಪ್ರತಿನಿಧಿ ಶಿಬಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts