More

    ಶ್ರೀಲಂಕಾದಲ್ಲಿ ಬುರ್ಖಾಕ್ಕೆ ನಿರ್ಬಂಧ?: ಮೂಲಭೂತವಾದದ ಸಂಕೇತ

    ಕೊಲಂಬೊ: ದೇಶದ ಭದ್ರತೆಯ ದೃಷ್ಟಿಯಿಂದ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗುವುದು ಮತ್ತು ಸಾವಿರದಷ್ಟು ಇಸ್ಲಾಮಿಕ್ ಶಾಲೆಗಳನ್ನು ಮುಚ್ಚಲಾಗುವುದು ಎಂದು ಶ್ರೀಲಂಕಾದ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಹೇಳಿದ್ದಾರೆ.

    ಬುರ್ಖಾ ಮೂಲಭೂತವಾದದ ಸಂಕೇತವಾಗಿದೆ. ಶ್ರೀಲಂಕಾದ ಇತಿಹಾಸವನ್ನು ಗಮನಿಸಿದರೆ ಆರಂಭಿಕ ದಿನಗಳಲ್ಲಿ ಮುಸ್ಲಿಂ ಮಹಿಳೆಯರು, ಯುವತಿಯರು ಬುರ್ಖಾ ಧರಿಸುತ್ತಿರಲಿಲ್ಲ. ಬುರ್ಖಾ ಧರಿಸುವ ಬೆಳವಣಿಗೆ ತೀರಾ ಇತ್ತೀಚಿನದ್ದಾಗಿದೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಮುಸ್ಲಿಂ ಮಹಿಳೆಯರು ಪೂರ್ಣ ಮುಖ ಮುಚ್ಚುವಂತೆ ಧರಿಸುವ ಬುರ್ಖಾವನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ. ಖಚಿತವಾಗಿಯೂ ನಾವು ಬುರ್ಖಾ ನಿಷೇಧಿಸುತ್ತೇವೆ ಎಂದು ವೀರಶೇಖರ ತಿಳಿಸಿದ್ದಾರೆ.

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು, ಅದಕ್ಕೆ ಹೊರತಾಗಿ ಯಾರು ಯಾವುದೇ ಶಾಲೆಯನ್ನು ತೆರೆದು ತಮ್ಮಿಷ್ಟದ ಶಿಕ್ಷಣ ನೀಡುವುದಕ್ಕೆ ಅವಕಾಶ ಇರುವುದಿಲ್ಲ. ಧಾರ್ವಿುಕ ಶಿಕ್ಷಣದ ಹೆಸರಿನಲ್ಲಿ ಮದರಸಾಗಳನ್ನು ಸ್ಥಾಪಿಸುವುದಕ್ಕೂ ಅವಕಾಶ ಇಲ್ಲ. ಇರುವಂತಹ ಮದರಸಾಗಳನ್ನೇ ಮುಚ್ಚುತ್ತೇವೆ ಎಂದು ಸಚಿವರು ಹೇಳಿದ್ದಾರೆ.

    ಶ್ರೀಲಂಕಾದಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದು, 2019ರಲ್ಲಿ ಚರ್ಚ್ ಮತ್ತು ಹೋಟೆಲ್​ಗಳ ಮೇಲೆ ಬಾಂಬ್ ದಾಳಿ ನಡೆದ ವೇಳೆ 250ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಇದರ ನಂತರ ತಾತ್ಕಾಲಿಕವಾಗಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿತ್ತು.

    ವಿಧಾನಸಭೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts