More

    VIDEO: ರನ್​ ವೇ ಮೇಲೆ ಅಪಘಾತಕ್ಕೀಡಾಗಿ 3 ಚೂರುಗಳಾಗಿ ಬಿದ್ದ ವಿಮಾನ; ಮೂವರು ಸಾವು, 179ಮಂದಿಗೆ ಗಾಯ

    ಇಸ್ತಾಂ​ಬುಲ್​: ಟರ್ಕಿಯ ಇಸ್ತಾಂಬುಲ್​​ನ ಸಬಿಹಾ ಗೊಕ್ಸೆನ್ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಬೇಕಿದ್ದ ಪ್ರಯಾಣಿಕರಿದ್ದ ವಿಮಾನ ಒದ್ದೆಯಾದ ರನ್​ವೇದಲ್ಲಿ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದು 179 ಮಂದಿ ಗಾಯಗೊಂಡಿದ್ದಾರೆ.
    ರನ್​ ವೇದಲ್ಲಿ ವಿಮಾನ ಸ್ಕಿಡ್​ ಆಗಿ ಲ್ಯಾಂಡ್ ಆಗಿ ಮೂರು ತುಂಡುಗಳಾಗಿ ಬಿದ್ದ ಭಯಹುಟ್ಟಿಸುವ ವಿಡಿಯೋ ಕೂಡ ವೈರಲ್ ಆಗಿದೆ.

    ಈ ವಿಮಾನದಲ್ಲಿ ಒಟ್ಟು 183 ಜನರಿದ್ದರು. ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮೃತಪಟ್ಟಿದ್ದಾರೆ ಎಂದು ಟರ್ಕಿ ಸರ್ಕಾರ ತಿಳಿಸಿದೆ.

    ಮಾನ ರನ್​ ವೇದಲ್ಲಿ ಲ್ಯಾಂಡ್​ ಆಗುವಾಗ ಸ್ಕಿಡ್​ ಆಗಿ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಮಾನ ರನ್​ ವೇದಲ್ಲಿ ವೇಗವಾಗಿ ಬಂದು ನಂತರ ಮೂರು ಭಾಗಗಳಾಗಿ ಚದುರಿ ಬಿದ್ದಿದೆ ಎನ್ನಲಾಗಿದೆ.
    ವಿಮಾನ ಅಪಘಾತಕ್ಕೆ ಕೆಟ್ಟ ವಾತಾವರಣವೇ ಕಾರಣ ಎನ್ನಲಾಗಿದೆ. ಮೋಡಮುಸುಕಿದ ವಾತಾವರಣವಿದ್ದುದರಿಂದ ವಿಮಾನ ಸರಿಯಾಗಿ ರನ್​ ವೇ ಮೇಲೆ ಇಳಿಯಲಿಲ್ಲ ಎಂದು ತಿಳಿಸಿದೆ.

    ವಿಮಾನ ಅಪಘಾತದಲ್ಲಿ ಗಾಯಗೊಂಡವರನ್ನು ಸುತ್ತಮುತ್ತಲ ಒಟ್ಟು 18 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts