More

    ಯೋಜನೆಗಳ ಉಪಯೋಗ ಪಡೆಯಿರಿ

    ಸಿರಿಗೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಸಾರ್ವಜನಿಕರು ಸಿಬ್ಬಂದಿಯಿಂದ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.

    ಇದನ್ನೂ ಓದಿ: ಕೆರೆ ತುಂಬಿಸುವ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ

    ಗ್ರಾಮದ ನಾಗನಗೌಡ ರಂಗ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸ್ವ-ಸಹಾಯ ಸಂಘಗಳ ಒಕ್ಕೂಟಗಳಿಗೆ ಸಂಘಗಳ ನಿರ್ವಹಣೆಯಲ್ಲಿ ಪದಾಧಿಕಾರಿಗಳ ಪಾತ್ರ, ನಾಯಕತ್ವದ ಜವಬ್ದಾರಿಯ ಕುರಿತು ಪ್ರಯೋಗಗಳ ಮೂಲಕ ಮಾಹಿತಿ ನೀಡಿ, ಸೌಲಭ್ಯಗಳ ಬಗ್ಗೆ ತಿಳಿಸಿದರು. 50 ಕ್ಕೂ ಹೆಚ್ಚೂ ಯೋಜನೆಗಳನ್ನು ಜನರಿಗೆ ಪ್ರಮಾಣಿಕವಾಗಿ ತಲುಪಿಸಲಾಗುವುದು ಎಂದರು.

    ರಂಗಮಂದಿರದ ಅಧ್ಯಕ್ಷ ಕೆ.ಬೀಮಲಿಂಗಪ್ಪ ಮಾತನಾಡಿ ಜನಮಂಗಲ ಕಾರ್ಯಕ್ರಮವು ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ಅದರಲ್ಲೂ ನ್ಯೂನತೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸುವಂತಹ ಕಾರ್ಯ ಸಂಸ್ಥೆ ಮಾಡುತ್ತಿದೆ ಇದು ಶ್ಲಾಘನೀಯವಾದದ್ದು ಎಂದರು.

    ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರ್, ವಲಯ ಮೇಲ್ವಿಚಾರಕ ಹನುಮಂತಪ್ಪ, ಕೃಷಿ ಮೇಲ್ವಿಚರಕರ ಪ್ರಭು ಹಿರೇಮಠ್ ಸೇವಾ ಪ್ರತಿನಿಧಿಗಳಾದ ಗುರುಸಿದ್ಧ, ಪಾರ್ವತಿ, ಲಿಂಗನಗೌಡ, ಮಂಜು, ವಿಶಾಲಕ್ಷಿ, ಅನುಸೂಯಾ, ಗೌಸೀಯಾ, ರುದ್ರಮುನಿಸ್ವಾಮಿ, ಒಕ್ಕೂಟದ ಪದಾಧಿಕಾರಿಗಳಾದ ಗೀತಾ, ಬಸಮ್ಮ, ಮಂಜುಳ, ನಾಗಮಣಿ, ಮೌಲಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts