More

    ಎನ್​ಒಸಿ ಕೊಡಿಸಲು ಮಧ್ಯವರ್ತಿಗಳ ಹಾವಳಿ

    ಶಿರಸಿ: ನಗರಸಭೆಯಿಂದ ವಿದ್ಯುತ್ ಹಾಗೂ ಇತರ ನಿರಾಕ್ಷೇಪಣಾ ಪತ್ರ (ಎನ್​ಒಸಿ) ಪಡೆಯಲು ಮಧ್ಯವರ್ತಿಗಳನ್ನು ಅವಲಂಬನೆ ಮಾಡಬೇಕಾಗಿದೆ. ಇವರ ಹಾವಳಿ ಮಿತಿಮೀರಿದೆ. ಇದು ನಗರಾಡಳಿತದ ಹೆಸರು ಕೆಡಿಸುತ್ತಿದೆ ಎಂಬ ದೂರು ನಗರಸಭೆ ಸದಸ್ಯರಿಂದಲೇ ಕೇಳಿ ಬಂದವು.

    ಇಲ್ಲಿನ ಅಟಲ್ ಜಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರದೀಪ ಶೆಟ್ಟಿ ವಿಷಯ ಪ್ರಸ್ತಾಪಿಸಿದರು.

    ನಗರಸಭೆಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಿದೆ. ವಿದ್ಯುತ್ ಎನ್​ಒಸಿಗೆ ತೀರಾ ಸಮಸ್ಯೆ ಆಗುತ್ತಿದೆ. 18ರಿಂದ 20 ಸಾವಿರ ರೂ.ಗಳನ್ನು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ. ನೇರವಾಗಿ ಫಲಾನುಭವಿಗಳು ನಗರಸಭೆಗೆ ಬಂದರೆ ಆಗದ ಕಾರ್ಯ ಮಧ್ಯವರ್ತಿಗಳ ಮೂಲಕ ಆಗಮಿಸಿದರೆ ಆಗುತ್ತದೆ. ಅವರ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ನಗರಸಭೆ ಹೆಸರು ಕೆಡಲು ಕಾರಣವಾಗಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಇದು ನಿಲ್ಲದಿದ್ದರೆ ನಗರಸಭೆ ಸದಸ್ಯರೇ ಪ್ರತಿಭಟಿಸಬೇಕಾಗುತ್ತದೆ ಎಂದರು.

    ಇದಕ್ಕೆ ದನಿಗೂಡಿಸಿದ ನಾಗರಾಜ ನಾಯ್ಕ, ನಗರಸಭೆ ಸದಸ್ಯರ ಹತ್ತಿರವೂ ಆಗದ ಕಾರ್ಯವನ್ನು ಮಧ್ಯವರ್ತಿಗಳು ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಖಾದರ್ ಆನವಟ್ಟಿ ಮಾತನಾಡಿ, ಅತಿಕ್ರಮಣ ಜಾಗದಲ್ಲಿರುವವರಿಗೆ ಎನ್​ಒಸಿ ಕೊಡಲು ಬರುತ್ತಿಲ್ಲ. ಆದರೆ ಮಧ್ಯವರ್ತಿಗಳು ಹಣ ಪಡೆದು 2 ದಿನಗಳೊಳಗೆ ಎನ್​ಒಸಿ ಒದಗಿಸುತ್ತಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ಇದಕ್ಕೆ ಅಧ್ಯಕ್ಷ ಗಣಪತಿ ನಾಯ್ಕ ಪ್ರತಿಕ್ರಿಯಿಸಿ, ಇದೇ ವಿಚಾರವಾಗಿವ ರಾಜೀವನಗರದ ವ್ಯಕ್ತಿಯೋರ್ವರಿಗೆ 25 ಸಾವಿರ ತೆಗೆದುಕೊಳ್ಳಲಾಗಿದೆ ಎಂಬ ದೂರು ಬಂದಿದೆ. ಇನ್ನು ಮುಂದೆ ಈ ರೀತಿ ಆಗಬಾರದು. ಒಂದೊಮ್ಮೆ ಇಂಥ ಘಟನೆಗಳು ಮರುಕಳಿಸಿದರೆ ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

    ನಗರಕ್ಕೆ ಕುಡಿಯುವ ನೀರು ಪೂರೈಸುವ ಮಾರಿಗದ್ದೆ ಹಾಗೂ ಕೆಂಗ್ರೆ ಜಾಕ್ ವೆಲ್ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲು ಕ್ರಮವಹಿಸಲಾಗುವುದು. ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅನುಕೂಲವಾಗಿ ಇರ್ನÌರ್, ಶೌಚಗೃಹ ಕಾಮಗಾರಿ ಅನುಷ್ಠಾನಗೊಳಿಸಲು ಕೈಗೊಳ್ಳಲಾಗುವುದು ಎಂದರು. ಜತೆ, ಕೆಂಗ್ರೆ ಮತ್ತು ಮಾರಿಗದ್ದೆ ಜಾಕ್​ವೆಲ್ ಬಳಿ ತಾತ್ಕಾಲಿಕ ಒಡ್ಡು ನಿರ್ವಿುಸಲು ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts