More

    ಆ.29ರಿಂದ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು

    ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್) ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 29 ರಿಂದ 31 ರವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ಲೀಗ್‌ನ ಆಯೋಜಕ ಮಾಷಲ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ. ಕೋವಿಡ್-19ರಿಂದಾಗಿ ಕಳೆದ 2 ಆವೃತ್ತಿಗಳು ಮುಂದೂಡಲ್ಪಟ್ಟಿದ್ದವು.
    ದೇಶೀಯ, ವಿದೇಶಿ ಹಾಗೂ ಹೊಸ ಯುವ ಆಟಗಾರರು (ಎನ್‌ವೈಪಿ) ಒಳಗೊಂಡಂತೆ ಆಟಗಾರರನ್ನು ಎ, ಬಿ, ಸಿ ಮತ್ತು ಡಿ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇದಾದ ಬಳಿಕ ಆಲ್ರೌಂಡರ್ಸ್‌, ಡಿಫೆಂಡರ್ಸ್‌ ಹಾಗೂ ರೈಡರ್ಸ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿದೆ.

    ಇದನ್ನೂ ಓದಿ: ಕನ್ನಡಿಗ ಕೆಎಲ್ ರಾಹುಲ್ ಅರ್ಧಶತಕದಾಟ; ಮುನ್ನಡೆಯತ್ತ ಭಾರತ

    ಆಟಗಾರರಿಗೆ ಮೂಲಬೆಲೆ ಎ ಕೆಟಗರಿಗೆ 30 ಲಕ್ಷ ರೂ, ಬಿ ಕೆಟಗರಿಗೆ 20 ಲಕ್ಷ ರೂ, ಸಿ ಕೆಟಗರಿಗೆ 10 ಲಕ್ಷ ರೂ ಹಾಗೂ ಡಿ ಕೆಟಗರಿಗೆ 6 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿ ಫ್ರಾಂಚೈಸಿಗೆ ಗರಿಷ್ಠ 4.4 ಕೋಟಿ ರೂಪಾಯಿ ಮೊತ್ತದ ಬಜೆಟ್ ನಿಗದಿಪಡಿಸಲಾಗಿದೆ. 500ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಹರಾಜು ಪ್ರಕ್ರಿಯೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಲಿದೆ. ಸದ್ಯ 12 ತಂಡಗಳ ಎಲ್ಲ ಆಟಗಾರರು ಹರಾಜಿಗೆ ಲಭ್ಯರಿದ್ದು, ಹರಾಜು ಪ್ರಕ್ರಿಯೆಗೆ ಕೆಲದಿನ ಬಾಕಿ ಇರುವಾಗ ತಂಡಗಳಿಗೆ ರಿಟೇನ್ ಅವಕಾಶ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

    *ಡಿಸೆಂಬರ್‌ನಿಂದ ಲೀಗ್?
    ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಡಿಸೆಂಬರ್‌ನಲ್ಲಿ ಲೀಗ್ ಆಯೋಜಿಸಲಾಗುವುದು ಎಂದು ಮಾಷಲ್ ಸ್ಪೋರ್ಟ್ಸ್ ತಿಳಿಸಿದೆ. ಲೀಗ್ ಆಯೋಜನೆಗೆ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಜತೆಗೆ ಕೋವಿಡ್ ಅಬ್ಬರ ಕಡಿಮೆಯಾಗಬೇಕಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    *ಹರಾಜು ಪ್ರಕ್ರಿಯೆ: ಆ.29 ರಿಂದ 31
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಎಲ್ಲಿ: ಮುಂಬೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts