More

    ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ: ಕೊಪ್ಪಳ ಜಿಲ್ಲಾಧಿಕಾರಿಗೆ ಸಮುದಾಯದ ಮುಖಂಡರ ಮನವಿ

    ಕೊಪ್ಪಳ: ಪಿಂಜಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಸಮುದಾಯ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ 25-30 ಲಕ್ಷ ಇದೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಶೇ.90 ಬಡವರಿದ್ದೇವೆ. ಗಾದಿ, ಹಗ್ಗ, ಕಣ್ಣಿ ತಯಾರಿಕೆ ನಮ್ಮ ಮೂಲ ವೃತ್ತಿಯಾಗಿದೆ. ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದೇವೆ. ಸಮುದಾಯ ಹಿಂದುಳಿದ ವರ್ಗ 1ರಲ್ಲಿ ಬರುತ್ತದೆ. ಆದರೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅಷ್ಟಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲವೆಂದು ಅಳಲು ತೋಡಿಕೊಂಡರು.

    ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು. ಪ್ರತ್ಯೇಕ ನಿಗಮ ಸ್ಥಾಪಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಸಚಿವರು, ಸಂಸದರು ಹಾಗೂ ಶಾಸಕರಿಗೆ ನಮ್ಮ ಸಮುದಾಯ ಹಿಂದುಳಿದ ಬಗ್ಗೆ ಮಾಹಿತಿ ಇದ್ದು, ಸರ್ಕಾರದ ಮನವೊಲಿಸಿ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

    ಸಮುದಾಯದ ಜಿಲ್ಲಾಧ್ಯಕ್ಷ ಕಾಸಿಂ ಅಲಿ ಮುದ್ದಾಬಳ್ಳಿ, ರಾಜ್ಯ ಸಹ ಕಾರ್ಯದರ್ಶಿ ಷಹಾಜುದ್ದೀನ್ ಸಾಬ್, ಜಿಲ್ಲಾ ಕಾರ್ಯದರ್ಶಿ ಯಾಸಿನ್ ಸಾಬ್, ಮುಖಂಡರಾದ ಅಲ್ಲಾಸಾಬ್ ಗೊಂದಿಹೊಸಳ್ಳಿ, ಫಕೃದ್ಧಿನ್, ಮುರ್ತುಜಾಸಾಬ್, ರೇಷ್ಮಾ ಖಾಜಾವಲಿ ಕಂದಕೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts