More

    ಮತ್ತೆ ಒಂದಾಗೋಣ ಬಾ ಎಂದು ಕರೆದು ಏರ್​ಹೋಸ್ಟೆಸ್​ ಅನ್ನು ಕೊಂದನಾ ಪೈಲಟ್​?

    ನವದೆಹಲಿ: ಗುರುಗ್ರಾಮದಲ್ಲಿರುವ ಗೇಟೆಡ್​ ಕಾಂಡೊಮಿನಿಯಂ (ಒಂದೇ ಕಟ್ಟಡದಲ್ಲಿ ಹಲವು ಕೋಣೆಗಳಿದ್ದು, ಅವನ್ನು ಬೇರೆ ಬೇರೆಯವರು ಸ್ವಂತಕ್ಕೆ ಖರೀದಿಸಿರುವುದು ಇಲ್ಲವೇ ಬಾಡಿಗೆ ಪಡೆದಿರುವ ಕಟ್ಟಡ) 5ನೇ ಮಹಡಿಯಿಂದ ಜಿಗಿದು ಏರ್​ಹೋಸ್ಟೆಸ್​ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಿಕ್ಕಿಂ ಮೂಲದ ಪೆಗ್ಗ್ಯಾಲಾ ಭುಟಿಯಾ (26) ಆತ್ಮಹತ್ಯೆ ಮಾಡಿಕೊಂಡವರು. ಈ ಬಗ್ಗೆ ದೂರು ನೀಡಿರುವ ಪೆಗ್ಗ್ಯಾಲಾ ಅವರ ಸಹೋದರಿ ಬೇಬ್ಯಾಲಾ ಭುಟಿಯಾ, ತನ್ನ ಅಕ್ಕ ಪೆಗ್ಗ್ಯಾಲಾ ಭುಟಿಯಾ ಅಂತಾರಾಷ್ಟ್ರೀಯ ವೈಮಾನಿಕ ಸಂಸ್ಥೆಯಲ್ಲಿ ಏರ್​ಹೋಸ್ಟೆಸ್​ ಆಗಿದ್ದಳು. ದೇಶಿಯ ವೈಮಾನಿಕ ಸಂಸ್ಥೆಯಲ್ಲಿ ಪೈಲಟ್​ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವಕನನ್ನು 3 ವರ್ಷಗಳಿಂದ ಪ್ರೇಮಿಸುತ್ತಿದ್ದಳು ಎಂದು ವಿವರಿಸಿದ್ದಾರೆ.

    ಲಾಕ್​ಡೌನ್​ನಿಂದಾಗಿ ವಿಮಾನ ಸಂಚಾರ ರದ್ದುಗೊಂಡ ನಂತರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಕಳೆದೊಂದು ತಿಂಗಳಿಂದ ಪೈಲಟ್​ ತನ್ನ ಅಕ್ಕನೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದ್ದ. ಸಾಮಾಜಿಕ ಜಾಲತಾಣದ ಎಲ್ಲ ಖಾತೆಗಳಲ್ಲೂ ತನ್ನ ಅಕ್ಕನ ಅಕೌಂಟ್​ ಅನ್ನು ಬ್ಲಾಕ್​ ಮಾಡಿದ್ದ. ಇದರಿಂದ ನನ್ನ ಅಕ್ಕ ತುಂಬಾ ನೊಂದುಕೊಂಡಿದ್ದಳು. ಇಬ್ಬರ ನಡುವಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ಒಂದು ಅವಕಾಶ ನೀಡುವಂತೆ ಕೋರಿ ಆಕೆ ಪ್ರತಿದಿನವೂ ಪೈಲಟ್​ಗೆ ಇಮೇಲ್​ ರವಾನಿಸುತ್ತಿದ್ದಳು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಿದ್ದೇ ಕಂಗನಾ: ಸ್ವರಾ ಭಾಸ್ಕರ್​

    ಅಷ್ಟು ದಿನವೂ ಆಕೆಯ ಇಮೇಲ್​ ಅನ್ನು ಗಮನಿಸಿದರೂ ಗಮನಿಸದವನಂತೆ ಹಾಗೂ ಒಂದೊಮ್ಮೆ ಉತ್ತರ ಕೊಟ್ಟರೂ ಕೇವಲ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೇಲ್​ ಮಾಡುತ್ತಿದ್ದ ಪೈಲಟ್​, ಶನಿವಾರ ನಾವಿಬ್ಬರೂ ಮತ್ತೆ ಒಂದಾಗಿ ಬಾಳೋಣ. ನನ್ನ ಸ್ನೇಹಿತನ ಮನೆಯಲ್ಲಿ ಗೆಟ್​ ಟು ಗೆದರ್​ ಇದೆ. ಆ ಪಾರ್ಟಿಗೆ ನೀನೂ ಬಾ ಎಂದು ಕರೆದಿದ್ದ. ರಾತ್ರಿ 10.25ಕ್ಕೆ ಸ್ವತಃ ತಾನೇ ಬಂದು ನನ್ನ ಅಕ್ಕನನ್ನು ಪಿಕ್​ಅಪ್​ ಮಾಡಿಕೊಂಡು ಹೋಗಿದ್ದ ಎಂದು ತಿಳಿಸಿದ್ದಾರೆ.

    ಆದರೆ ಭಾನುವಾರ ನಸುಕಿನಲ್ಲಿ ನನಗೆ ಕರೆ ಮಾಡಿದ ಆತ ನಿನ್ನ ಅಕ್ಕ 5ನೇ ಮಹಡಿಯಿಂದ ಹಾರಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇನೆ. ತಕ್ಷಣ ಬಾ ಎಂದು ಹೇಳಿದ. ತಕ್ಷಣವೇ ನಾನು ಆಸ್ಪತ್ರೆಗೆ ಹೋಗಿ ನೋಡಿದಾಗ ನನ್ನ ಅಕ್ಕ ಅದಾಗಲೇ ಮೃತಪಟ್ಟಿದ್ದಳು. ಆಕೆಯ ಮೈ ತುಂಬಾ ನೀಲಿ ಗಟ್ಟಿದ ಬಾಸುಂಡೆಗಳೇ ಕಾಣಿಸುತ್ತಿದ್ದವು. ಆಕೆಯ ತುಟಿಗೂ ಗಾಯವಾಗಿದ್ದು ಕಂಡು ಬಂದಿತು. ಹಾಗಾಗಿ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿ ದೂರು ಕೊಡುತ್ತಿರುವುದಾಗಿ ಹೇಳಿದ್ದಾರೆ.

    ಪೈಲಟ್​ನನ್ನು ತಕ್ಷಣವೇ ವಶಕ್ಕೆ ಪಡೆದು ವಿಚಾರಿಸಿದೆವು. ಆದರೆ ಆತ ಏರ್​ಹೋಸ್ಟೆಸ್​ ಆಕಸ್ಮಿಕವಾಗಿ 5ನೇ ಮಹಡಿಯ ಬಾಲ್ಕನಿಯಿಂದ ಬಿದ್ದುದಾಗಿ ಹೇಳಿದ್ದಾನೆ. ಸದ್ಯಕ್ಕೆ ಆತನನ್ನು ಬಿಟ್ಟು ಕಳುಹಿಸಿದ್ದೇವೆ. ಅಗತ್ಯ ಬಿದ್ದರೆ ಆತನನ್ನು ಬಂಧಿಸಲಾಗುವುದು ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ.

    ಬೈಪೋಲಾರ್ ಕಾಯಿಲೆಯಿಂದ ಸುಶಾಂತ್ ನರಕಯಾತನೆ; ಧನುಷ್​ ಸಿನಿಮಾದಲ್ಲಿದೆ ಉತ್ತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts