More

    ಲಕ್ಷ ರೂ. ಬೆಲೆಯ ಪಾರಿವಾಳ ಇದು! ಅಂಥದ್ದೇನಿದೆ ಇದರಲ್ಲಿ?!

    ಭಟ್ಕಳ: ಅರೆರೆ, ಪಾರಿವಾಳದ ಬೆಲೆ ಲಕ್ಷ ರೂಪಾಯಿಯಾ? ಎಲ್ಲಾದ್ರೂ ಉಂಟೇ ಎನ್ನಬೇಡಿ. ಲಕ್ಷ ಲಕ್ಷ ರೂ. ಬೆಲೆಯ ಪಾರಿವಾಳಗಳನ್ನು ಕದ್ದವನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ!

    ಪಟ್ಟಣದ ಆಝಾದ್‌ನಗರ ಪಾರಿವಾಳ ಸಾಕಾಣಿಕಾ ಕೇಂದ್ರದಿಂದ 25 ಪಾರಿವಾಳಗಳನ್ನು ಕದ್ದವನನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಬೆಂಗಳೂರಿನ ಪನ್ನೀರ ಸೆಲ್ವಂ (40) ಬಂಧಿತ. ಆತನಿಂದ ಸುಮಾರು 15 ಲಕ್ಷ ರೂ. ಮೌಲ್ಯದ 18 ಪಾರಿವಾಳಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಏಳು ಪಾರಿವಾಳಗಳನ್ನು ಆತ ಬೇರೆಯವರಿಗೆ ಮಾರಿದ್ದು ಅದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಅ. 5ರಂದು ರಾತ್ರಿ ಒಟ್ಟು ದುಬಾರಿ ಬೆಲೆಯ ಪಾರಿವಾಳಗಳನ್ನು ಕದ್ದು, ಪರಾರಿಯಾಗಿದ್ದ. ಪಾರಿವಾಳ ಸಾಕಾಣಿಕಾ ಕೇಂದ್ರದ ಮಾಲೀಕ ಅಫ್ಜಲ್ ಕಾಶೀಮಜಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಟಿವಿ ಫುಟೇಜ್ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವರ್ಷದ ಹಿಂದೆ ಭಟ್ಕಳಕ್ಕೆ ಬಂದು ಅಫ್ಜಲ್ ಅವರಿಂದ ಪಾರಿವಾಳ ಖರೀದಿಸಿದ್ದ ಎನ್ನಲಾಗಿದೆ.

    ಅಪ್ಜಲ್ ಅವರು ದುಬಾರಿ ಬೆಲೆಯ ಸುಮಾರು 350ರಷ್ಟು ಪಾರಿವಾಳ ಸಾಕಿದ್ದಾರೆ. ಭಾರತದ ನಂಬರ್ 1 ಲಾಹೋರಿ ಜಾತಿಯ ಪಾರಿವಾಳಗಳೂ ಇವರ ಬಳಿ ಇವೆ. ಇವು ಅದ್ಭುತ ಸೌಂದರ್ಯ ಹಾಗೂ ಚುರುಕು ಬುದ್ಧಿ ಹೊಂದಿವೆ. ಹಾಗಾಗಿ ಇವು ತಲಾ ಲಕ್ಷ ರೂ.ವರೆಗೂ ಬೆಲೆ ಹೊಂದಿವೆ. ಅಫ್ಜಲ್ 2018ರಿಂದ ಸತತ 3 ವರ್ಷ ರಾಷ್ಟ್ರೀಯ ಪಾರಿವಾಳಗಳ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts