More

    ಮೈಸೂರು: ರಂಗೋಲಿ ಪುಡಿಯಲ್ಲಿ ಅರಳಿದ ಅಪ್ಪು ಬೃಹತ್ ಚಿತ್ರ

    ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಚಿತ್ರಕಲಾವಿದ ಪುನೀತ್ ಕುಮಾರ್ ಹಾಗೂ ರಂಗೋಲಿ ಕಲಾವಿದೆ ಲಕ್ಷ್ಮೀ ನೇತೃತ್ವದಲ್ಲಿ 13 ಕಲಾವಿದರು ನಟ ದಿ. ಪುನೀತ್ ರಾಜ್‌ಕುಮಾರ್ ಅವರ ಬೃಹತ್ ಚಿತ್ರವನ್ನು ಬಿಡಿಸುವ ಮೂಲಕ ಗಮನ ಸೆಳೆದರು.

    160 ಅಡಿ ಉದ್ದ ಹಾಗೂ 70 ಅಡಿ ಅಗಲದ ಈ ಚಿತ್ರವನ್ನು ಶನಿವಾರ ಸಂಜೆ 5ಕ್ಕೆ ಬಿಡಿಸಲು ಪ್ರಾರಂಭಿಸಿದ ಕಲಾವಿದರು ಬೆಳಗ್ಗಿನ ಜಾವ 7ಕ್ಕೆ ಪೂರ್ಣಗೊಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಈ ಚಿತ್ರವನ್ನು ನೋಡಿ ಸಂಭ್ರಮಿಸಿದರು. ಪುನೀತ್ ಕುಮಾರ್ ಹಾಗೂ ಲಕ್ಷ್ಮೀ ಅವರೊಂದಿಗೆ ಕಲಾವಿದರಾದ ಮಧುಸೂದನ, ವಿ. ಟ್ರೀಜಾ, ಚಂದನ, ದೀಪ, ಪುನೀತ್ ರಾಯಣ್ಣ, ಮಂಜುನಾಥ್, ರವಿ, ಸೌಜನ್ಯ, ಮಣಿ, ಮೂರ್ತಿ, ಸೋನು, ಸಂಪ್ರಿತ್ ಹಾಗೂ ಶಾಲಿನಿ ಸಹಕರಿಸಿದರು. ವಾಣಿಜ್ಯೋದ್ಯಮಿ ಅಭಿಲಾಷ್ ಕಲಾವಿದರ ಉತ್ಸಾಹಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಿದರು. ಈ ಚಿತ್ರ ಬಿಡಿಸಲು 450 ಕೆ.ಜಿ. ರಂಗೋಲಿಯನ್ನು ಬಳಕೆ ಮಾಡಲಾಗಿದೆ.

    ‘ಪುನೀತ್‌ರಾಜ್ ಕುಮಾರ್ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಕಳೆದ ವರ್ಷ ರಕ್ತದಾನ ಶಿಬಿರ ನಡೆಸಿದೆವು. ಈ ಬಾರಿ ಬೃಹತ್ ಚಿತ್ರವನ್ನು ಬಿಡಿಸಿದ್ದೇವೆ. ಈ ರೀತಿ ಪ್ರತಿವರ್ಷ ಅಪ್ಪು ಹೆಸರಿನಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಅಪ್ಪು ನಮ್ಮನ್ನು ಅಗಲಿದರೂ ಅವರು ತಮ್ಮ ಸೇವಾ ಚಟುವಟಿಕೆ ಹಾಗೂ ವ್ಯಕ್ತಿತ್ವದ ಮೂಲಕ ಶಾಶ್ವತವಾಗಿ ಇದ್ದಾರೆ’ ಎಂದು ಕಲಾವಿದ ಪುನೀತ್ ಕುಮಾರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts