More

    ನಿಸ್ವಾರ್ಥ ಸೇವೆಯಿಂದ ಸಹಕಾರ ಸಂಘಗಳ ಅಭಿವೃದ್ಧಿ

    ಶೃಂಗೇರಿ: ಉತ್ತಮ ಕಾರ್ಯನಿರ್ವಹಣೆ, ನಂಬಿಕೆ ಹಾಗೂ ವಿಶ್ವಾಸ ಸಹಕಾರ ಸಂಘದ ಪ್ರಮುಖ ಗುರಿಯಾಗಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ ತಿಳಿಸಿದರು.

    ಭಾನುವಾರ ತಾಲೂಕಿನ ಕಾವಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ 67ನೇ ಅಖಿಲಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಅವರು, ಷೇರುದಾರರು ಸಹಕಾರ ಸಂಘಗಳ ಜೀವಾಳವಾಗಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ಸಂಘಗಳು ಕಾರ್ಯನಿರ್ವಸಬೇಕು. ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಕ್ಷೇತ್ರದ ಪ್ರಯೋಜನ ಸಿಗಬೇಕು ಎಂದರು.

    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ ಮಾತನಾಡಿ, ಸಹಕಾರ ಸಂಘಗಳು ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಸಮಾಜಮುಖಿ ಚಿಂತನೆ, ನಿಸ್ವಾರ್ಥ ಮನೋಭಾವನೆಯಿಂದ ನಿರಂತರವಾಗಿ ಶ್ರಮಿಸಿದರೆ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ. ಸಹಕಾರ ಚಳುವಳಿ ಮೂಲಕ ಸಹಕಾರ ಸಂಘವು ಅಸ್ತಿತ್ವ ಕಂಡುಕೊಂಡಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶವನ್ನು ಸಂಘವು ತಮ್ಮ ಪ್ರಮುಖ ಗುರಿಯಾಗಿರಿಸಿಕೊಳ್ಳಬೇಕು ಎಂದರು.

    ತೆಕ್ಕೂರು ಹಿರಿಯ ಸಹಕಾರಿ ಧುರೀಣ ಬಿ.ಹಾಲಪ್ಪಗೌಡ, ಹೆಗ್ಗದ್ದೆ ಶ್ರೀ ರಾಮಚಂದ್ರ,

    ಟಿಎಪಿಸಿಎಂಎಸ್​ಗೆ ಆಯ್ಕೆಯಾದ ಶ್ರೀಧರ್​ರಾವ್ ಅಣ್ಣುಕೂಡಿಗೆ ಅವರನ್ನು ಸನ್ಮಾನಿಸಲಾಯಿತು. ಶೃಂಗೇರಿ ತಾಲೂಕಿನ ಅತ್ಯುತ್ತಮ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಡೆದ ಪಿಕಾರ್ಡ್ ಬ್ಯಾಂಕ್ ಹಾಗೂ ಶಾರದಾ ಸೊಸೈಟಿಯನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts