More

    ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಪತಿ ಮೃತದೇಹದ ಮುಂದೆ ಪತ್ನಿಯ ಶೋಕ: ಭಾವುಕರಾದ ನೆಟ್ಟಿಗರು

    ನವದೆಹಲಿ: ಕಳೆದ ವೀಕೆಂಡ್​ನಲ್ಲಿ ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್​ ಅನುಜ್​ ಸೂದ್​ ಪಾರ್ಥೀವ ಶರೀರದ ಮುಂದೆ ನಿಂತು ಅವರ ಪತ್ನಿ ಅಕ್ರಿತಿ ಸೂದ್​ ದುಃಖಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತುಂಬಾ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

    ಚಂಡೀಗಢ ಸಮೀಪದ ಮಣಿ ಮಜ್ರಾ ಸ್ಮಶಾನಕ್ಕೆ ಪಂಚಕುಲದಲ್ಲಿರುವ ಯೋಧನ ಮನೆಯಿಂದ ಪಾರ್ಥೀವ ಶರೀರ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಇಡಲಾಗಿದ್ದ ಹುತಾತ್ಮ ಯೋಧನ ಶವಪೆಟ್ಟಿಗೆಯ ಮೇಲೆ ಅಕ್ರಿತಿ ಸೂದ್​ ಅವರು ಕೈಗಳನ್ನಿಟ್ಟು ಮುಖವನ್ನು ಅದರ ಮೇಲೆ ಒರಗಿಸಿ ಕೆಲವೊತ್ತು ಪತಿಯ ಮುಖವನ್ನು ದಿಟ್ಟಿಸಿ ನೋಡಿದಂತ ಸನ್ನಿವೇಶ ಮನಕಲಕುವಂತಿತ್ತು.

    ಇದನ್ನೂ ಓದಿ: ದೇಶಕ್ಕೆ 25 ಸಾವಿರ ಕೋಟಿ ರೂ. ಉಳಿತಾಯ

    ಈ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿದಾಡುತ್ತಿದೆ. ಕೆಲ ನೆಟ್ಟಿಗರು ಈ ಚಿತ್ರ ನನ್ನನ್ನು ಮೂಕನಾಗಿಸಿದೆ ಎಂದರೆ, ಇನ್ನು ಕೆಲವರು ಇದು ಬೆಲೆ ಕಟ್ಟಲಾಗದ ಚಿತ್ರ ಎಂದಿದ್ದಾರೆ.

    30 ವರ್ಷದ ಅನುಜ್ ಸೂದ್​ ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಶನಿವಾರ ರಾತ್ರಿ ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾದರು. ಹುತಾತ್ಮ ಯೋಧರನ್ನು ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

    ಇದನ್ನೂ ಓದಿ: ಭಾರತದ ಸ್ಪಷ್ಟ ನಿಲುವು, ಪಾಕಿಸ್ತಾನದ ವಿವೇಕಹೀನ ವರ್ತನೆಗೆ ತಕ್ಕ ಉತ್ತರ

    ಅಂದಹಾಗೆ ಸೂದ್​ ಅವರು 2008ರಲ್ಲಿ ಸೇನೆಯನ್ನು ಸೇರಿದ್ದರು. ಇದು ಅವರ ಕನಸು ಕೂಡ ಆಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಮೇಜರ್ ಅನುಜ್ ಸೂದ್ ಅವರು 21 ರಾಷ್ಟ್ರೀಯ ರೈಫಲ್ಸ್‌ನ ಭಾಗವಾಗಿರುವ ಬ್ರಿಗೇಡ್ ಆಫ್ ದಿ ಗಾರ್ಡ್ಸ್ ರೆಜಿಮೆಂಟ್​ನವರಾಗಿದ್ದರು. (ಏಜೆನ್ಸೀಸ್​)

    ಹಾದಿ ತಪ್ಪಿದ್ರೆ ಕಿಕ್​ಔಟ್, ರಾಜ್ಯದ ಸರ್ಕಾರಿ ನೌಕರರಿಗೆ ಸಿದ್ಧವಾಗುತ್ತಿದೆ ಮೂಗುದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts