More

    ಮಾಸ್ಕ್ ಧರಿಸಿದ್ದರೆ ಮಾತ್ರ ಪೆಟ್ರೋಲ್ ಕೊಡ್ತಾರಂತೆ!: ಯಾವ ಏರಿಯಾದ ಬಂಕ್‌ಗಳಲ್ಲಿ? ಇಲ್ಲಿದೆ ನೋಡಿ ವಿವರ

    ಬೆಂಗಳೂರು: ರಾಜ್ಯ ರಾಜಧಾನಿಯ ಹಲವಾರು ಪೆಟ್ರೋಲ್ ಬಂಕ್‌ಗಳಲ್ಲಿ ಈಗಾಗಲೇ ‘ನೋ ಮಾಸ್ಕ್ ನೋ ಪೆಟ್ರೋಲ್’ ಎಂಬ ಫಲಕವನ್ನು ನೇತು ಹಾಕಿದ್ದಾರೆ ಅವುಗಳ ಮಾಲೀಕರು.

    ಅತಿ ಹೆಚ್ಚು ಕರೊನಾ ಸೋಂಕಿತರು ಪತ್ತೆಯಾಗಿರುವ ಬೆಂಗಳೂರಿನ 39 ವಾರ್ಡ್‌ಗಳನ್ನು ‘ರೆಡ್ ಅಲರ್ಟ್ ಏರಿಯಾ’ (ಹಾಟ್‌ಸ್ಪಾಟ್) ಎಂದು ಬಿಬಿಎಂಪಿ ಗುರುತಿಸಿದ್ದು ಅಲ್ಲಿ ಈ ಬೋರ್ಡ್‌ಗಳು ಕಂಡುಬರುತ್ತಿವೆ.
    ಈ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಬಂದರೆ ಮಾತ್ರ ಗ್ರಾಹಕರ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಲು ಬಂಕ್ ಮಾಲೀಕರು ನಿರ್ಧರಿಸಿದ್ದಾರೆ.

    ಅಜಾದ್‌ನಗರ ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, ಜೆ.ಪಿ. ನಗರ, ಸಿಂಗಸಂದ್ರ, ಅರಮನೆನಗರ, ಶಾಕಾಂಬರಿನಗರ, ಹೊರಮಾವು, ವಸಂತನಗರ ಮತ್ತಿತರ ರೆಡ್ ಅಲರ್ಟ್ ವಾರ್ಡ್‌ಗಳಲ್ಲಿ 58 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಹೀಗಾಗಿ ಸುತ್ತಲಿನ ಪೆಟ್ರೋಲ್ ಬಂಕ್‌ಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂದು ಪೆಟ್ರೋಲ್ ಡೀಲರ್ಸ್‌ ಅಸೋಸಿಯೇಷನ್ ಸೂಚನೆ ನೀಡಿದೆ.

    ‘ಮಾಸ್ಕ್ ಧರಿಸಿದರೆ ಮಾತ್ರ ಪೆಟ್ರೋಲ್’ ಎಂಬ ಫಲಕವನ್ನು ರೆಡ್ ಅಲರ್ಟ್ ಏರಿಯಾಗಳಲ್ಲಿನ ಬಂಕ್‌ಗಳ ಮೇಲೆ ಅಂಟಿಸಲಾಗಿದೆ. ಜತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬಂಕ್‌ನ ಸಿಬ್ಬಂದಿ ಗ್ರಾಹಕರಿಗೆ ಅರಿವು ಮೂಡಿಸುತ್ತಿದ್ದಾರೆ.

    FACT CHECK |ನಿದ್ರಿಸುತ್ತಿದ್ದ ಶವಾಗಾರದ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ತಿಳಿದು ಜೀವಂತ ಸಂಸ್ಕಾರ ಮಾಡಿದ ಘಟನೆ ನಿಜವೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts