More

    4 ರೂಪಾಯಿ ಏರಿತು ಪೆಟ್ರೋಲ್​, ಡೀಸೆಲ್ ಬೆಲೆ: ವಾರದುದ್ದಕ್ಕೂ ಏರಿದ್ದರ ಪರಿಣಾಮ

    ನವದೆಹಲಿ: ಕಳೆದ ಒಂದು ವಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಪ್ರತಿ ಲೀಟರ್ ಮೇಲೆ ಒಟ್ಟು ಅಂದಾಜು 4 ರೂಪಾಯಿ ಏರಿಕೆ ಕಂಡಿದೆ. ಸತತ ಏಳನೇ ದಿನವಾದ ಶನಿವಾರವೂ ಪೆಟ್ರೋಲ್ ಬೆಲೆ ಲೀಟರಿಗೆ 59 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರಿಗೆ 58 ಪೈಸೆ ಏರಿಕೆಯಾಗಿದೆ.

    ಲಾಕ್​ಡೌನಿನ 82 ದಿನಗಳ ಅವಧಿಯಲ್ಲಿ ಸ್ಥಿರವಾಗಿದ್ದು, ಅದು ಮುಗಿಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ದರಗಳ ನಿತ್ಯ ಪರಿಷ್ಕರಣೆ ಶುರುವಾಗಿ ಇಂದಿಗೆ ಒಂದು ವಾರ ಪೂರ್ತಿಯಾಗಿದೆ. ಇಂದಿನ ಬೆಲೆ ಏರಿಕೆಯೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 74.57 ರೂಪಾಯಿಯಿಂದ 75.16 ರೂಪಾಯಿ ಮತ್ತು ಡೀಸೆಲ್​ ಲೀಟರಿಗೆ 72.81 ರೂಪಾಯಿಯಿಂದ 73.39 ರೂಪಾಯಿಗೆ ಏರಿಕೆಯಾಗಿದೆ.

    ಇದನ್ನೂ ಓದಿ: ಕಥೆಯಲ್ಲ-ಜೀವನ: ಅನಾರೋಗ್ಯಪೀಡಿತ ಪೋಲಿಸಪ್ಪನ ನೋವಿನ ಕಥೆ-ವ್ಯಥೆ

    ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏಕರೂಪದಲ್ಲಿ ಇಲ್ಲದ ಕಾರಣ ಆಯಾ ರಾಜ್ಯದಲ್ಲಿ ಅಲ್ಲಿನ ತೆರಿಗೆಗಳಿಗೆ ಅನುಗುಣವಾಗಿ ಬದಲಾವಣೆ ಕಂಡಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್​, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್​ ಗಳು ನಿತ್ಯವೂ ಮಾಡುತ್ತಿದ್ದ ದರ ಪರಿಷ್ಕರಣೆಯನ್ನು ಮಾರ್ಚ್ 14 ರಂದು ನಿಲ್ಲಿಸಿದ್ದವು. ಇದೇ ಅವಧಿಯಲ್ಲಿ ಸರ್ಕಾರವೂ ಪ್ರತಿ ಲೀಟರ್ ಮೇಲಿನ ಅಬಕಾರಿ ಸುಂಕವನ್ನು 3 ರೂಪಾಯಿ ಏರಿಕೆ ಮಾಡಿತ್ತು.ಈ ಏರಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.(ಏಜೆನ್ಸೀಸ್)

    ಕುಕ್ಕರ್ ಒಳಗೆ ಸಿಕ್ಕಾಕ್ಕೊಳ್ತು ಪುಟ್ಟ ಬಾಲಕಿಯ ತಲೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts