More

    ಪೆಟ್ರೋಲ್ ಕಾರಾಯ್ತು ವಿದ್ಯುತ್ ಚಾಲಿತ, ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳ ಕಮಾಲ್ !

    ಶಿವಮೊಗ್ಗ: ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹಳೆಯ ಕಾರೊಂದನ್ನು ವಿದ್ಯುತ್ ಚಾಲಿತವಾಗಿ ಮಾರ್ಪಾಡು ಮಾಡುವ ಮೂಲಕ ನೈಪುಣ್ಯತೆ ಮೆರೆದಿದ್ದಾರೆ.
    ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜೆ.ಅಮಿತ್ ಕುಮಾರ್ ಮಾರ್ಗದರ್ಶನದಲ್ಲಿ ಜಿ.ಸಾತ್ವಿಕ್, ಅಭಿಷೇಕ್, ಕಾರ್ತಿಕ್ ಶೆಟ್ಟಿ, ಎಚ್.ಎಸ್.ಮನೋಹರ ಅವರನ್ನೊಳಗೊಂಡ ವಿದ್ಯಾರ್ಥಿಗಳ ತಂಡ 2021-22ರ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪೆಟ್ರೋಲ್ ಚಾಲಿತ ಕಾರನ್ನು ವಿದ್ಯುತ್ ಚಾಲಿತ ಕಾರನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ.
    ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ನ್ಯೂಜೆನ್ ಐಇಡಿಸಿ ಮೂಲಕ ಕೇಂದ್ರ ಸರ್ಕಾರ 2.50 ಲಕ್ಷ ರೂ. ಆರ್ಥಿಕ ನೆರವು ನೀಡಿತ್ತು. ಈ ಕಾರಿನ ಬ್ಯಾಟರಿಯನ್ನು 5 ತಾಸು ಚಾರ್ಜ್ ಮಾಡಿದರೆ ಸುಮಾರು 90 ಕಿಮೀ ಕ್ರಮಿಸಬಹುದು ಸಂಪೂರ್ಣ ರೀಚಾರ್ಜ್ ಮಾಡಲು ಐದು ಯೂನಿಟ್ ವಿದ್ಯುತ್ ಅವಶ್ಯಕ. ಇದಕ್ಕಾಗಿ ಸುಮಾರು 30 ರೂ. ವ್ಯಯವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts