More

    ಕೊಯಮತ್ತೂರಿನಲ್ಲಿ ಹಿಂದೂ ಮುನ್ನಣಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

    ಕೊಯಮತ್ತೂರು : ತಮಿಳುನಾಡಿನ ಕೊಯಮತ್ತೂರ್​ನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಹಿಂದೂ ಮುನ್ನಣಿ ಕಚೇರಿ ಮೇಲೆ ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಬಾಂಬ್​ ಎಸೆದು ಪರಾರಿಯಾಗಿದ್ದಾರೆ. ಇದರಿಂದ ಸಿಟಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಮೊನ್ನೆಯಷ್ಟೆ ಇಲ್ಲಿನ ಮಸೀದಿ ಮೇಲೆ ದಾಳಿ ನಡೆದಿತ್ತು. ಈ ಘಟನೆ ಬಳಿಕ ಮನೆಗೆ ಹಿಂತಿರುಗುತ್ತಿದ್ದ ಹಿಂದೂ ಮುನ್ನಣಿ ಸಂಘಟನೆಯ ಕಾರ್ಯಕರ್ತನ ಮೇಲೂ ಆಗಂತುಕರು ಅಟ್ಯಾಕ್ ಮಾಡಿದ್ದರು. ಇದರಿಂದ ಮಾರ್ಚ್ 6ರಂದು ಹಿಂದೂ ಮುನ್ನಣಿ ಸಂಘಟನೆ ಮತ್ತು ಮುಸ್ಲಿಂ ಸಂಘಟನೆಗಳು ಕೊಯಮತ್ತೂರು ಬಂದ್​ಗೆ ಕರೆ ನೀಡಿದ್ದರು. ಹೀಗಾಗಿ ಹಿಂದೂ ಮುನ್ನಣಿ ಕಚೇರಿ ಮೇಲಿನ ಪೆಟ್ರೋಲ್ ಬಾಂಬ್ ದಾಳಿ ಪ್ರತೀಕಾರದ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ನಿನ್ನೆ ತಡರಾತ್ರಿ ಈ ದುಷ್ಕೃತ್ಯ ಎಸಗಿದ್ದು, ಬೆಳಗ್ಗೆ 10 ಗಂಟೆಗೆ ಸಿಬ್ಬಂದಿ ಕಚೇರಿ ಬಾಗಿಲು ತೆಗೆದಾಗ ಬಾಟಲ್​ನ ಚೂರುಗಳು ಸಿಕ್ಕಿದ್ದು, ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಾಲಾಜಿ ಶರವಣನ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸುತ್ತಮುತ್ತಲಿನ ಕಣ್ಗಾವಲು ಕ್ಯಾಮೆರಾಗಳನ್ನು ಪರಿಶೀಲನೆ ನಡೆಸ್ತಿದ್ದಾರೆ.

    ಮಾರ್ಚ್ 6ರಂದು ಮಸೀದಿ ಮೇಲೆ ನಡೆದಿದ್ದ ದಾಳಿ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಕೋರ್ಟ್​ಗೆ ಹಾಜರು ಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂದು ಬೆಳಗ್ಗೆ ವಾಹನ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಇವರನ್ನು ಅರೆಸ್ಟ್ ಮಾಡಲಾಗಿತ್ತು. (ಏಜೆನ್ಸೀಸ್​)

    ಹೋಟೆಲ್​ ಕ್ಲೀನ್​ ಮಾಡುತ್ತಿದ್ದವ ಈಗ ಸಾವಿರಾರು ಕೋಟಿಯ ಒಡೆಯ: ಓಯೋ ಸಂಸ್ಥಾಪಕನ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts