More

    ಸರ್ಕಾರಕ್ಕೆ ಹೂವನೂರು ಗ್ರಾಮಸ್ಥರ ಮನವಿ : ಮುಳುಗಡೆ ಗ್ರಾಮವೆಂದು ಘೋಷಿಸಿ

    ಹುನಗುಂದ: ತಾಲೂಕಿನ ಹೂವನೂರು ಗ್ರಾಮದ ಎಸ್‌ಸಿ ಕಾಲನಿಯಲ್ಲಿ ಮಲಪ್ರಭೆ ನದಿ ನೀರು ಪದೇ ಪದೆ ನುಗ್ಗುತ್ತಿದ್ದು, ಕೂಡಲೇ ಯುಕೆಪಿ ಅಡಿ ಗ್ರಾಮವನ್ನು ಮುಳುಗಡೆ ಎಂದು ಘೋಷಿಸಿ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಅವರಿಗೆ ಮನವಿ ಸಲ್ಲಿಸಲಾಯಿತು.

    ಗ್ರಾಮದ ಮುತ್ತಪ್ಪ ಮಾದರ ಮಾತನಾಡಿ, ಹುನಗುಂದ ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾದ ಹೂವನೂರ ಗ್ರಾಮದ ಎಸ್‌ಸಿ ಬಡಾವಣೆಗಳು ಮಲಪ್ರಭಾ ನದಿ ನೀರಿನಿಂದ ಪ್ರವಾಹಕ್ಕೆ ಸಿಲುಕುತ್ತಿವೆ. ಗ್ರಾಮದ ಎಸ್‌ಸಿ ಕಾಲನಿಗಳಿಗೆ ಅಂದಾಜು 13 ವರ್ಷಗಳಿಂದ ಪ್ರವಾಹ ಬರುತ್ತಿದೆ. ಆದರೆ ಇಲ್ಲಿನ ನಿವಾಸಿಗಳ ಸಮಸ್ಯೆಗೆ ಯಾವುದೇ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

    ಈ ಬಾರಿ ಕೂಡ ನದಿಯ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಧವಸ, ಧಾನ್ಯಗಳು ಸೇರಿದಂತೆ ಅಪಾರ ನಷ್ಟವಾಗಿದೆ. ಈಗಾಗಲೇ ನಿರಂತರ ಮಳೆಯಿಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗ್ರಾಮಸ್ಥರು ಭಯದಲ್ಲೇ ಕಾಲ ಕಳೆಯುವಂತಾಗಿದೆ. ಸರ್ಕಾರ ಗ್ರಾಮ ಮುಳುಗಡೆ ಮಾಡುವ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚಿಸಬೇಕು. ಅಲ್ಲದೆ, ಈ ಸ್ಥಳವನ್ನಾದರೂ ಯುಕೆಪಿ ಅಡಿಯಲ್ಲಿ ಮುಳುಗಡೆ ಮತ್ತು ಸ್ಥಳಾಂತರ ಮಾಡಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಅಮರೇಶ ನಾಗೂರ, ಮಲ್ಲಿಕಾರ್ಜುನ ಹೊಸಮನಿ ಮಾತನಾಡಿದರು. ಬಸವರಾಜ ಚಲವಾದಿ, ಬಸಪ್ಪ ಮಾದರ, ಪರಸಪ್ಪ ಚಲವಾದಿ, ಯಮನಪ್ಪ ಚಲವಾದಿ, ಹುಲಗಪ್ಪ ಮಾದರ, ಹುಲಗಪ್ಪ ಚಲವಾದಿ, ಪರಸಪ್ಪ ಮಾದರ, ಗುರುಪಾದಪ್ಪ ಚಲವಾದಿ, ಸುಭಾಷ ಚಲವಾದಿ, ಜಗದೀಶ ಚಲವಾದಿ, ಬಸಪ್ಪ ಚಲವಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts