More

    ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ- ಗ್ರಾಪಂ ಕಾರ್ಯದರ್ಶಿ ಸಣ್ಣ ಜಂಬಣ್ಣ ಅನಿಸಿಕೆ

    ಅಳವಂಡಿ: ಓದುವ ಬೆಳಕು ಕಾರ್ಯಕ್ರಮ ಮಕ್ಕಳ ಜ್ಞಾನವೃದ್ಧಿಗೆ ಸಹಕಾರಿಯಾಗಲಿದೆ ಎಂದು ಗ್ರಾಪಂ ಕಾರ್ಯದರ್ಶಿ ಸಣ್ಣ ಜಂಬಣ್ಣ ರುದ್ರಾಕ್ಷಿ ಹೇಳಿದರು.

    ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಿರಂತರ ಅಭ್ಯಾಸಕ್ಕೆ ಅಣಿಯಾಗಿ ; ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸಲಹೆ

    ಸಮೀಪದ ಕವಲೂರಿನ ಗ್ರಂಥಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಪಂ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಅಂಗವಾಗಿ ಹಮ್ಮಿಕೊಂಡಿದ್ದ ಓದುವ ಬೆಳಕು ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿ, ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯವಾಗುತ್ತದೆ ಎಂದರು.

    ಗ್ರಂಥಪಾಲಕಿ ಶೋಭಾ ಬಾರಕೇರ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಗಣಿತ, ವಿಜ್ಞಾನ ವಿಷಯಗಳ ಚಿತ್ರ ಬರೆಯುವ, ಗಟ್ಟಿಯಾಗಿ ಓದು, ಪತ್ರ ಬರವಣಿಗೆ, ಅಳತೆ ಮತ್ತು ಮಾಪಕ ಮುಂತಾದ ವಸ್ತುಗಳ ಬಗ್ಗೆ ಮನವರಿಕೆ ಮಾಡಲಾಗುವುದು. ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಓದಲು ಪ್ರೇರೆಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

    ಕಲಿಕಾ ಟ್ರಸ್ಟ್‌ನ ಪುಷ್ಪಾ ಯಳವತ್ತಿಮಠ, ಪ್ರಮುಖರಾದ ರಮೇಶ ರಾಟಿಮನಿ, ಬಸವರಾಜ ಗಡ್ಡದ, ನಾಗಯ್ಯ ಸಾರಂಗಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts