More

    ನೀರಾವರಿಗೆ ಶಾಶ್ವತ ಪರಿಹಾರ: 42 ಲಕ್ಷ ಹೆಕ್ಟೇರ್​ಗೆ ವಿಸ್ತರಣೆಯಾಗಲಿದೆ ಅಚ್ಚುಕಟ್ಟು ವ್ಯಾಪ್ತಿ

    | ರುದ್ರಣ್ಣ ಹರ್ತಿಕೋಟೆ

    ಬೆಂಗಳೂರು: ರಾಜ್ಯದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಲೆಯ ಕೊನೆಯ ಭಾಗಕ್ಕೆ ನೀರೇ ಸಿಗುತ್ತಿಲ್ಲ ಎಂಬ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದ್ದು, ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯನ್ನು 42 ಲಕ್ಷ ಹೆಕ್ಟೇರ್​ಗೆ ಹೆಚ್ಚಿಸಲು ತೀರ್ಮಾನಿಸಿದೆ.

    ರಾಜ್ಯದಲ್ಲಿ ಎಲ್ಲ ಜಲಾಶಯಗಳ ವ್ಯಾಪ್ತಿಯಲ್ಲಿ ಒಟ್ಟಾರೆ 28 ಲಕ್ಷ ಹೆಕ್ಟೇರ್​ ಅಚ್ಚುಕಟ್ಟು ಪ್ರದೇಶ ಇದ್ದರೂ ವಿವಿಧ ಕಾರಣಗಳಿಂದಾಗಿ 6 ಲಕ್ಷ ಹೆಕ್ಟೇರ್​ಗೆ ನೀರು ಹರಿಯುತ್ತಿಲ್ಲ. ಇತ್ತೀಚಿಗಿನ ಜಲ ಸಂಪನ್ಮೂಲ ಇಲಾಖೆ ಸಮೀೆಯಿಂದಲೇ ಈ ಮಾಹಿತಿ ಲಭ್ಯವಾಗಿದೆ. ಈಗ ಬೇರೆ ಬೇರೆ ಕ್ರಮ ಕೈಗೊಂಡು ನೀರಾವರಿ ಬಾಧಿತ ಪ್ರದೇಶಕ್ಕೆ ನೀರು ನೀಡಲು ಸರ್ಕಾರ ಮುಂದಾಗಿದೆ.

    ಶೇ.50 ಮಾತ್ರ ಬಳಕೆ: ರಾಜ್ಯದ ವಿವಿಧ ಜಲಾಶಯಗಳಲ್ಲಿ ಲಭ್ಯವಿರುವ ನೀರಿನಲ್ಲಿ ಶೇ.50 ಮಾತ್ರ ಬಳಕೆಯಾಗುತ್ತಿದೆ. ಬಳಕೆ ಪ್ರಮಾಣ ಹೆಚ್ಚಿಸಿ ಅಚ್ಚುಕಟ್ಟು ಪ್ರದೇಶ ವಿಸ್ತರಿಸುವುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ.

    ಕೊರತೆಯಾಗದಂತೆ ಎಚ್ಚರ: ಜಲ ಸಂಪನ್ಮೂಲ ಇಲಾಖೆ ಮೂಲಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಾಗದಂತೆ ಸರ್ಕಾರ ಎಚ್ಚರವಹಿಸಿದೆ. ಈ ಸಾಲಿನ ಆಯವ್ಯಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 5000 ಕೋಟಿ ರೂ., ಕಳಸಾ&ಬಂಡೂರಿ ಯೋಜನೆಗೆ 3000 ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ 3000 ಕೋಟಿ ರೂ. ಮೇಕೆದಾಟು ಯೋಜನೆಗೆ 1000 ಕೋಟಿ ರೂ. ಹಾಗೂ ನವಲೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ 1000 ಕೋಟಿ ರೂ. ತೆಗೆದಿರಿಸಿದೆ.

    ಬಾಧಿತ ಅಚ್ಚುಕಟ್ಟು ಪ್ರದೇಶ ಗಳಿಗೆ ನೀರು ಒದಗಿಸಬೇಕೆಂಬ ನಿಟ್ಟಿನಲ್ಲಿ ಮಹತ್ವಾಕಾಂ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಪ್ರಸ್ತುತ ಚಾಲನೆಯಲ್ಲಿರುವ ಯೋಜನೆಗಳು ಮೂರು ಲ ಹೆಕ್ಟೇರ್​ ಭೂಮಿಗೆ ನೀರು ಒದಗಿಸುತ್ತವೆ. ಅಚ್ಚುಕಟ್ಟು ಪ್ರದೇಶದಲ್ಲಿ ಇದ್ದು ನೀರು ಬಾರದೆ ಒಣಗಿ ನಿಂತಿರುವ ರೈತರ ಹೊಲಗಳಿಗೆ ನೀರು ಒದಗಿಸುವ ಈ ಯೋಜನೆಗಳಿಂದ ರೈತನ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ಬಂದು ಮಂದಹಾಸ ಮೂಡಲಿದೆ.

    | ಗೋವಿಂದ ಕಾರಜೋಳ ಜಲ ಸಂಪನ್ಮೂಲ ಸಚಿವ

    ಸರ್ಕಾರದ ಉದ್ದೇಶವೇನು?
    ರಾಜ್ಯದಲ್ಲಿ ಇರುವ ಕೃಷಿ ಭೂಮಿಯಲ್ಲಿ 55 ಲಕ್ಷ ಹೆಕ್ಟೇರನ್ನು ನೀರಾವರಿಗೆ ಒಳಪಡಿಸಬಹುದಾಗಿದೆ. ಈಗ ವಾಸ್ತವವಾಗಿ 22 ಲಕ್ಷ ಹೆಕ್ಟೇರ್​ ನೀರಾವರಿಗೆ ಒಳಪಟ್ಟಿದೆ. ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳ ಮೂಲಕ ಈ ವರ್ಷದ ಕೊನೆಯ ವೇಳೆಗೆ ನೀರಾವರಿಗೆ ಒಳಪಡುವ ಪ್ರದೇಶ 42 ಲಕ್ಷ ಹೆಕ್ಟೇರ್​ಗೆ ತಲುಪಲಿದೆ ಎಂದು ಜಲ ಸಂಪನ್ಮೂಲ ಇಲಾಖೆ ಅಂದಾಜು ಮಾಡಿದೆ. ನೀರಾವರಿ ಬಾಧಿತ 6 ಲಕ್ಷ ಹೆಕ್ಟೇರ್​, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಯಲ್ಲಿ 15.22 ಲಕ್ಷ ಎಕರೆ, ಇನ್ನೂ ವಿವಿಧ ಯೋಜನೆಗಳ ಮೂಲಕ 4 ರಿಂದ 5 ಲಕ್ಷ ಹೆಕ್ಟೇರನ್ನು ಈ ವರ್ಷದ ಕೊನೆಗೆ ನೀರಾವರಿಗೆ ಒಳಪಡಿಸುವ ಉದ್ದೇಶವಿದೆ.

    ಯಾವ ಅಚ್ಚುಕಟ್ಟು, ಎಷ್ಟು ಬಾಧಿತ?
    (ಲಕ್ಷ ಹೆಕ್ಟೇರ್​ನಲ್ಲಿ)
    ಕೃಷ್ಣಾ ಮೇಲ್ದಂಡೆ- 1.25
    ಮಲಪ್ರಭಾ, ಘಟಪ್ರಭಾ- 0.85
    ಕಾವೇರಿ- 0.13
    ಭದ್ರಾ-0.40
    ತುಂಗಭದ್ರಾ-1.57

    ಸಮಗ್ರ ಕರ್ನಾಟಕಕ್ಕೆ ನೀರು
    ನೀರಾವರಿ ಯೋಜನೆ ಜಾರಿಯಿಂದಾಗಿ ಸಮಗ್ರ ಕರ್ನಾಟಕಕ್ಕೆ ನೀರು ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತ, ತುಂಗಭದ್ರಾ, ಭದ್ರಾ ಮೇಲ್ದಂಡೆ ಹೀಗೆ ವಿವಿಧ ಯೋಜನೆಗಳಲ್ಲಿ ಅಚ್ಚುಕಟ್ಟು ಪ್ರದೇಶ ವಿಸ್ತಾರ ಮಾಡಲಾಗುತ್ತಿದೆ.

    ಬಳಕೆ ಕಡಿಮೆ ಹೇಗೆ
    ಅಚ್ಚುಕಟ್ಟು ಪ್ರದೇಶದಲ್ಲಿ ಕೊನೆಯ ಹಂತಕ್ಕೆ ತಲುಪದಿರುವ ನೀರು ಶೇ.15 ಇದ್ದರೆ, ಅತಿ ಹೆಚ್ಚು ನೀರು ಬಳಕೆಯಿಂದ ಶೇ.12 ಭೂಮಿ ಬಳಕೆಯಾಗುತ್ತಿಲ್ಲ. ಎಲ್ಲ ಜಲಾಶಯಗಳಲ್ಲಿ ತುಂಬಿರುವ ಹೂಳಿನಿಂದ ಶೇ.10 ನೀರು ಬಳಕೆಯಾಗುತ್ತಿಲ್ಲ. ಇದರ ಜತೆಗೆ ನದಿ, ನಾಲೆಗಳಲ್ಲಿನ ಅಕ್ರಮ ಪಂಪ್​ಸೆಟ್​ಗಳಿಂದ ಶೇ.10 ನೀರು ಹೋಗುತ್ತಿದೆ. ಇದರಿಂದಾಗಿ ಶೇ. 47 ರಿಂದ 50 ನೀರು ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿಗೆ ಬಳಕೆಯಾಗುತ್ತಿಲ್ಲ. ಇದರಿಂದಾಗಿಯೇ ನೀರಾವರಿ ಬಾಧಿತ ಪ್ರದೇಶ 6 ಲಕ್ಷ ಹೆಕ್ಟೇರ್​ಗೆ ಹೆಚ್ಚಳವಾಗಿದೆ ಎಂಬುದನ್ನು ಜಲ ಸಂಪನ್ಮೂಲ ಇಲಾಖೆ ಗುರುತಿಸಿದೆ.

    * ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಸಂಕಲ್ಪ
    * ಬಾಧಿತ ಪ್ರದೇಶಗಳಿಗೆ ನೀರಿನ ವ್ಯವಸ್ಥೆ
    * ಅಗತ್ಯ ಹಣ ತೆಗೆದಿಟ್ಟ ಸರ್ಕಾರ

    ಬಾಧಿತ ಪ್ರದೇಶಕ್ಕೆ ನೀರು ಹೇಗೆ?
    ಜಲಾಶಯಗಳಲ್ಲಿ ತುಂಬಿರುವ ಹೂಳು ತೆಗೆಸುವುದಕ್ಕೆ ತಂತ್ರಜ್ಞಾನವಿಲ್ಲ. ಆದ್ದರಿಂದಲೇ ಪರ್ಯಾಯ ಮಾರ್ಗಗಳ ಮೂಲಕ ನೀರನ್ನು ಬೇರೆ ಬೇರೆ ಕಡೆ ಹಿಡಿದಿಡಲು ಆಲೋಚಿಸಲಾಗಿದೆ. ಕೆರೆ ತುಂಬಿಸುವುದು, ಜಾಕ್​ವೆಲ್​ ಅಳವಡಿಸಿ ನಾಲೆಗಳಿಗೆ ನೀರು ಹರಿಸುವುದು, ಏತ ನೀರಾವರಿಗಳ ಕಾಮಗಾರಿಗೆ ವೇಗ ನೀಡುವ ಕೆಲಸವನ್ನು ಸರ್ಕಾರ ತೀವ್ರಗತಿಯಲ್ಲಿ ಕೈಗೆತ್ತಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts