More

    ಆತ್ಮ ಯೋಜನೆ ಸದುಪಯೋಗಪಡಿಸಿಕೊಳ್ಳಿ

    ಪಿರಿಯಾಪಟ್ಟಣ: ರೈತರು ಹೆಚ್ಚು ಆದಾಯ ಗಳಿಸುವ ನಿಟ್ಟಿನಲ್ಲಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕೃಷಿ ಅಧಿಕಾರಿ ರವೀಂದ್ರ ತಿಳಿಸಿದರು.
    ಪಿರಿಯಾಪಟ್ಟಣ ತಾಲೂಕಿನ ಆಯಿತನಹಳ್ಳಿ ಗ್ರಾಮದಲ್ಲಿ ಆತ್ಮ ಯೋಜನೆ ಅಡಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಿಸಾನ್‌ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರತಿ ರೈತರಿಗೂ ಕೃಷಿಗೆ ಸಂಬಂಧಿಸಿದ ವಿವಿಧ ಬೆಳೆಗಳ ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ಆತ್ಮಯೋಜನೆ ಜಾರಿಗೆ ತರಲಾಗಿದೆ. ಕಿಸಾನ್ ಗೋಷ್ಠಿಗಳ ಮೂಲಕ ವಿವಿಧ ಬೆಳೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದಗಳನ್ನು ಏರ್ಪಡಿಸಿ ಮಾಹಿತಿ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ರೈತರು ಉತ್ತಮ ಬೆಳೆ ಬೆಳೆಯಬೇಕು ಎಂದರು.
    ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ಸಿರಿಧಾನ್ಯಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಬೆಳೆದರೆ ಸರ್ಕಾರದಿಂದ ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗೆ ನೀಡಲಾಗುವುದು ಹಾಗೂ ಬೆಳೆಗೆ ಬೇಕಾದ ಬೀಜಗಳನ್ನು ಇಲಾಖಾ ವತಿಯಿಂದಲೇ ನೀಡಲಾಗುತ್ತದೆ ಎಂದರು.
    ರಾವಂದೂರು ಹೋಬಳಿಗೆ ಸಂಬಂಧಿಸಿದಂತೆ ಈ ಭಾಗದ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡುವ ಉದ್ದೇಶದಿಂದ ಸದ್ಯದಲ್ಲಿಯೇ ಕೇಂದ್ರ ತೆರೆಯಲಾಗುವುದು ಎಂದರು.
    ಮಂಡ್ಯ ಜಿಲ್ಲೆ ನಾಗನಹಳ್ಳಿ ಕೃಷಿ ಸಂಶೋಧನ ತರಬೇತಿ ಕೇಂದ್ರದ ತರಬೇತಿ ಅಧಿಕಾರಿ ವಿದ್ಯಾಲಕ್ಷ್ಮೀ ಮಾತನಾಡಿ, ತಾಲೂಕಿನಲ್ಲಿ ರಾಗಿ ಹೆಚ್ಚಾಗಿ ಬೆಳೆಯುತ್ತಿದ್ದು, ಹೆಚ್ಚು ಇಳುವರಿ ಪಡೆಯಬೇಕಾದರೆ ಆಧುನಿಕ ತಳಿ ಬೀಜಗಳನ್ನು ಬಳಸಿಕೊಳ್ಳಿ ಮತ್ತು ರಾಗಿಯನ್ನು ಮಾರಾಟ ಮಾಡದೆ ಅದರಿಂದ ತಯಾರಿಸಬಹುದಾದ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದರು.
    ಗ್ರಾಪಂ ಅಧ್ಯಕ್ಷ ರಾಜೇಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಪಶು ಇಲಾಖೆಯ ವೈದ್ಯಾಧಿಕಾರಿ ಹೇಮಂತ್‌ಕುಮಾರ್, ರೇಷ್ಮೆ ಇಲಾಖೆಯ ಅಧಿಕಾರಿ ರಾಮಚಂದ್ರ, ಗ್ರಾಪಂ ಸದಸ್ಯ ಶ್ರೀಕಂಠ, ಮುಖಂಡರಾದ ಪುಟ್ಟರಾಜಪ್ಪ, ಬಸವರಾಜು, ಮಲ್ಲಿಕಾರ್ಜುನ್, ನಾಗೇಗೌಡ, ರಾಮಚಂದ್ರ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts