ಬೆಂಗಳೂರು: ಕೆಜಿಎಫ್ ಸಿನಿಮಾದ ನಂತರ ನಟ ಯಶ್ ದೇಶ, ವಿದೇಶಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇದರಿಂದ ಅವರ ಬ್ರ್ಯಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗಿದೆ. ಹೀಗಾಗಿ ಕಳೆದ ಕಲೆ ವರ್ಷಗಳಿಂದ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳು ಯಶ್ ಹಿಂದೆ ಬಿದ್ದಿವೆ. ತಮ್ಮ ಕಂಪೆನಿಯ ರಾಯಭಾರಿಯನ್ನಾಗಿ ನೇಮಿಸಲು ಹಲವು ಕಂಪೆನಿಗಳು ಪ್ರಯತ್ನ ನಡೆಸಿದ್ದು. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಹೊಂದಿರುವ ಪಾನೀಯ ಪೆಪ್ಸಿ ಕಂಪೆನಿ ತನ್ನ ನೂತನ ರಾಯಭಾರಿಯನ್ನಾಗಿ ಯಶ್ ಅವರನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ.
ಯುವಜನತೆಯನ್ನೇ ಕೇಂದ್ರಿಕರಿಸಿಕೊಂಡಿರುವ ಪೆಪ್ಸಿ ಬ್ರ್ಯಾಂಡ್ನ ನೂತನ ರಾಯಭಾರಿ ಯಶ್, ಈ ಬಗ್ಗೆ ಜಾಹೀರಾತಿನ ವಿಡಿಯೋವೊಂದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೆಪ್ಸಿ ಜಾಹೀರಾತಿನಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ನೋಡಿದ ಸಂತಸದಲ್ಲಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಸಂತಸಪಟ್ಟಿದ್ದಾರೆ.
Let’s Rise together! @PepsiIndia #RiseUpBaby #Ad pic.twitter.com/tOvG9pJwIH
— Yash (@TheNameIsYash) January 24, 2023
ಪೆಪ್ಸಿ ಕಂಪೆನಿಯ ರಾಯಭಾರಿಯಾಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಯಶ್, ಅಂತಾರಾಷ್ಟ್ರೀಯ ಬ್ರ್ಯಾಂಡ್ನ ಮುಖವಾಗಿ ಕಾಣಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ಹೊಸ ವರ್ಷವನ್ನು ಆರಂಭಿಸಲು ಇದು ಉತ್ತಮ ಮಾರ್ಗವಾಗಿದ್ದು, ನನ್ನ ಹೊಸ ಅವತಾರವನ್ನು ಅಭಿಮಾನಿಗಳು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಕಾಣಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಯಶ್ ಅವರನ್ನು ನೂತನ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿರುವ ಕುರಿತು ಪೆಪ್ಸಿಕೋ ಇಂಡಿಯಾದ ಪೆಪ್ಸಿ ಕೋಲಾ ವಿಭಾಗದ ಮುಖ್ಯಸ್ಥೆ ಸೌಮ್ಯಾ ರಾಥೋರ್ ಪ್ರತಿಕ್ರಿಯಿಸಿ, ಯಶ್ ಜತೆಗೆ ಒಪ್ಪಂದ ಮಾಡಿಕೊಳ್ಳಲು ಸಂತಸವಾಗುತ್ತಿದೆ. ಯಶ್ ಅಪಾರ ಸಂಖ್ಯೆಯ ಯುವ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದಿರಿಂದ ಪೆಪ್ಸಿ ಪಾನೀಯಕ್ಕೆ ಜನರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಯಶ್ ಪಾಲು ಅಧಿಕವಿದೆ ಎಂದು ಹೇಳಿಕೊಂಡಿದ್ದಾರೆ.
ಪೆಪ್ಸಿ ಬಿಡುಗಡೆ ಮಾಡಿರುವ 8 ಸೆಕುಂಡಿನ ನೂತನ ಜಾಹೀರಾತಿನಲ್ಲಿ ಯಶ್ ಕಾಣಿಸಿಕೊಂಡಿದ್ದು, ‘ನಾನು ನಿನ್ನನ್ನು ಪ್ರೀತಿಸುತ್ತೇನೆ, ಪೆಪ್ಸಿ!’ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)