More

    ಕಾಫಿ ಕೈಗಾರಿಕೆ ಉಳಿವಿಗೆ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲಾ ರೈತರ ಹೋರಾಟ

    ಚಿಕ್ಕಮಗಳೂರು: ‘ಕೈಗಾರಿಕೆ ಉಳಿಸಿ ಮಲೆನಾಡು ರಕ್ಷಿಸಿ’ ಎಂಬ ಘೊಷಣೆಯೊಂದಿಗೆ ನಿರ್ದಿಷ್ಟ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮಾಸಾಂತ್ಯದೊಳಗೆ ಹೋರಾಟ ನಡೆಸಲು ತೀರ್ವನಿಸಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ತಿಳಿಸಿದರು.

    ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಕಾಫಿ ಕೈಗಾರಿಕೆ ಉಳಿಸಲು ಹೋರಾಟದ ಭಾಗವಾಗಿ ಜಿಲ್ಲೆಯ ಕಳಸ, ಮೂಡಿಗೆರೆ, ಆಲ್ದೂರು, ಆವತಿ ಮತ್ತು ಚಿಕ್ಕಮಗಳೂರಿನಲ್ಲಿ ಚಳವಳಿಯ ಅನಿವಾರ್ಯತೆ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಪ್ರಜ್ಞಾವಂತ ಕೃಷಿಕರು, ಕಾರ್ವಿುಕರು ಹಾಗೂ ಹೋರಾಟದ ಬಗ್ಗೆ ಸಹಮತ ಇರುವ ರಾಜಕೀಯ ಮುಖಂಡರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗುವುದು. ಇದೇ ರೀತಿ ಕೊಡಗು ಮತ್ತು ಹಾಸನದಲ್ಲಿ ಸಮಾವೇಶ ನಡೆಸಿ ಜನಜಾಗೃತಿ ಮೂಡಿಸಲಾಗುವುದು. ನಂತರ ಮೂರು ಜಿಲ್ಲೆಯವರನ್ನು ಒಳಗೊಂಡ ಸಮಿತಿ ರಚಿಸಿ ನಿರ್ದಿಷ್ಟ ಬೇಡಿಕೆ ರೂಪಿಸಿ ಹಂತ ಹಂತವಾಗಿ ಬೇಡಿಕೆ ಈಡೇರಿಸಲು ಚಳವಳಿ ನಡೆಸಲಾಗುವುದು ಎಂದರು.

    ಚಿಕ್ಕಮಗಳೂರಿನ ಮಲೆನಾಡು ಪ್ರಾಂತ್ಯದಲ್ಲಿ ಲಕ್ಷಾಂತರ ಕಾರ್ವಿುಕರು ಹಾಗೂ ಈ ಭಾಗದಲ್ಲಿ ವಾಸಿಸುವ ಇತರ ಎಲ್ಲರಿಗೂ ಉದ್ಯೋಗ ಕಲ್ಪಿಸುತ್ತಿದ್ದ ಕಾಫಿ ಕೈಗಾರಿಕೆ ಸಂಪೂರ್ಣ ನಷ್ಟ ಅನುಭವಿಸುತ್ತಿದೆ. ಇದರಿಂದ ಕಾಫಿ ಕೃಷಿಕರೂ ಸೇರಿ ಮಲೆನಾಡಿನ ಜನಸಾಮಾನ್ಯರ ಜೀವನದ ಮೇಲೆ ಆರ್ಥಿಕ ದುಷ್ಪರಿಣಾಮ ಬೀರಿದೆ. ಹತ್ತಾರು ಜನರಿಗೆ ಉದ್ಯೋಗ ಕೊಡುತ್ತಿದ್ದ ಕಾಫಿ ಕೃಷಿಕರ ಮಕ್ಕಳು ಕೆಲಸ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕೈಗಾರಿಕೆ ಉಳಿವಿಗೆ ಹೋರಾಟ ನಡೆಸುವುದು ಅನಿವಾರ್ಯ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts