More

    ವದಂತಿ ನಂಬಿ ಎಲ್‌ಪಿಜಿ ಕೆವೈಸಿಗಾಗಿ ಮುಗಿಬಿದ್ದ ಜನ

    ಕಡೂರು: ಕೆವೈಸಿ ನೋಂದಣಿ ಮಾಡಿಸಿಕೊಂಡವರಿಗೆ ಮನೆ ಬಳಕೆ ಅಡುಗೆ ಅನಿಲ ದರ ಅರ್ಧ ಕಡಿಮೆಯಾಗಲಿದೆ. 500 ರೂ.ಗೆ ಅಡುಗೆ ಅನಿಲ ಸಿಲಿಂಡರ್ ಕೊಡುವ ಯೋಜನೆ ಜಾರಿಗೆ ಬರಲಿದೆ ಎಂಬ ಗಾಳಿಸುದ್ದಿ ನಂಬಿರುವ ಗ್ರಾಹಕರು ಕೆವೈಸಿ ಮಾಡಿಸಲು ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
    ಅಡುಗೆ ಅನಿಲ ಸಂಪರ್ಕವುಳ್ಳವರು ಇ-ಕೆವೈಸಿ ಮಾಡಿಸಿದರೆ ಜ.1ರಿಂದ ಸಹಾಯಧನ ಸಿಗಲಿದೆ. ಇಲ್ಲವಾದಲ್ಲಿ ವಾಣಿಜ್ಯ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗುತ್ತದೆ ಎಂಬಂಥ ಸುಳ್ಳು ಸುದ್ದಿ ದಿನದಿಂದ ದಿನಕ್ಕೆ ಹಬ್ಬುತ್ತಿದೆ. ಉಜ್ವಲ ಯೋಜನೆಯಡಿ ನೋಂದಾಯಿಸಿಕೊಂಡಿರುವ ಗ್ರಾಹಕರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಾಗುತ್ತದೆ. ಇದರಲ್ಲಿ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿ ಸಕ್ರಿಯ ಗ್ರಾಹಕರ ನೋಂದಾಯಿತ ಸಂಖ್ಯೆ ನಿಖರತೆ ಪಡೆಯುವ ಉದ್ದೇಶದಿಂದ ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಆದರೆ ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಕಡಿತವಾಗಲಿದೆ. ವಾಣಿಜ್ಯ ದರ ನೀಡಬೇಕಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವುದರಿಂದ ಗ್ರಾಹಕರು ಗ್ಯಾಸ್ ಅಂಗಡಿಗಳಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಲು ಮುಗಿಬೀಳುತ್ತಿದ್ದಾರೆ. ಅಂಥ ಯೋಜನೆ ಇಲ್ಲ ಎಂದರೂ ಗ್ರಾಹಕರು ಕೇಳುವ ಸ್ಥಿತಿಯಲ್ಲಿ ಇಲ್ಲ.
    ಇ-ಕೆವೈಸಿ ಮಾಡಿಸಲು ದಿನದಿಂದ ದಿನಕ್ಕೆ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿನಿಲ್ಲುತ್ತಿರುವ ಗ್ರಾಹಕರನ್ನು ನಿಯಂತ್ರಿಸುವುದು ಗ್ಯಾಸ್ ಏಜೆನ್ಸಿ ಸಿಬ್ಬಂದಿಗೆ ಸವಾಲಾಗಿದೆ. ಕೆಲವೆಡೆ ಪೊಲೀಸ್ ಸಿಬ್ಬಂದಿ ನಿಯೋಜಿಸಿಕೊಂಡು ಇ-ಕೆವೈಸಿ ಮಾಡಿಸಲಾಗುತ್ತಿದೆ. ಆದರೂ ಗ್ರಾಹಕರು ಮುಗಿಬಿದ್ದು ಕೆವೈಸಿ ಮಾಡಿಸುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts