More

    ಪೊಲೀಸ್ ಬ್ಯಾಂಡ್ ಸಂಗೀತದ ನಾದ ಮಾಧುರ್ಯದಲ್ಲಿ ಮಿಂದೆದ್ದ ಜನತೆ

    ಮೈಸೂರು: ದಸರಾ ಹಬ್ಬಕ್ಕೂ ಮುನ್ನ ಸಾಂಸ್ಕೃತಿಕ ನಗರಿಯ ಜನತೆ ಪೊಲೀಸ್ ಬ್ಯಾಂಡ್ ಸಂಗೀತದ ನಾದ ಮಾಧುರ್ಯದಲ್ಲಿ ಮಿಂದೆದ್ದಿತು.
    ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿರುವ ಮಾಧವ ಕೃಪ ಬಳಿಯ ಇಡೀ ಆವರಣ ಗುರುವಾರ ಸಂಜೆ ಪೊಲೀಸ್ ಬ್ಯಾಂಡ್ ತಂಗೀತದ ಕಂಪು ಚೆಲ್ಲಿತು.


    ಮೈಸೂರು ಗಣೇಶ ಉತ್ಸವದ ಅಂಗವಾಗಿ ಮೈಸೂರು ಗಣೇಶ ಉತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಡ್ ಮಾಸ್ಟರ್ ಆರ್.ಮೋಹನ್ ಕುಮಾರ್ ನೇತೃತ್ವದಲ್ಲಿ 21 ಪೊಲೀಸರು ಶಿಸ್ತುಬದ್ಧ ವಾದ್ಯಮೇಳದ ಮೂಲಕ ಪ್ರೇಕ್ಷಕರ ಎದೆಯಲ್ಲಿ ‘ಭಕ್ತಿ’ಯ ಸಂಚಲನ ಮೂಡಿಸಿದರು. ಸತತ ಒಂದು ಗಂಟೆ ಕಾಲ 10ಕ್ಕೂ ಹೆಚ್ಚು ಕೃತಿ, ಗೀತೆಗಳನ್ನು ನುಡಿಸಿ ಮನಗೆದ್ದರು.
    ಮೊದಲಿಗೆ ಶ್ರೀ ಪಟ್ನಂ ಸುಬ್ರಮಣ್ಯ ಅಯ್ಯರ್ ರಚನೆಯ ‘ವಲಚಿ’ ಸಾಹಿತ್ಯವನ್ನು ನವರಾಗ ಮಾಲಿಕೆಯ ರಾಗದಲ್ಲಿ, ಆದಿತಾಳದ ತಾಳದಲ್ಲಿ ನುಡಿಸಿಸಿದರು. ಬಳಿಕ ‘ಪ್ರಣಮಾಮ್ಯಹಮ್ ಗೌರಿ ಸುತಂ’ ಗೀತೆಯನ್ನು ಗೌಳ ರಾಗದಲ್ಲಿ ಹಾಗೂ ಆದಿತಾಳದಲ್ಲಿ ನುಡಿಸಿ ಪ್ರೇಕ್ಷಕರ ಮನಗೆದ್ದರು.


    ಕರ್ನಾಟಕ ಸಂಗೀತದಲ್ಲಿ ‘ರಘುವಂಶ ಸುಧಾ’, ‘ಸದಾ ಶಿವಂ’, ‘ಸರಸ್ವತಿಂ ಭಗವತಿಂ’, ‘ನೀವಲ್ಲ ಗುಣ ದೋಷ’, ‘ಕೃಪಪಾಲಯ’, ‘ಬೆಲ್ಸ್’, ‘ರಾಧ ಸಮೇತ ಕೃಷ್ಣ’, ‘ತಿಲ್ಲಾನ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ನುಡಿಸುವ ಮೂಲಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

    ಬ್ಯಾಂಡ್ ಮಾಸ್ಟರ್ ಆರ್.ಮೋಹನ್ ಕುಮಾರ್ ನೇತೃತ್ವದಲ್ಲಿ ಎಂ.ಆರ್.ಹನುಮಂತರಾಜು, ಆರ್.ದಾಸಪ್ಪ, ವಿ.ಸತೀಶ್, ಮಂಜು, ಎಂ.ವಿ.ಶಿವಕುಮಾರ್, ಕಾರ್ತಿಕ್, ತ್ಯಾಗರಾಜು, ಶಾಂತಕುಮಾರ್, ಪದ್ಮನಾಭ, ಮಧುಸೂದನ್, ಕುಮಾರ್, ವಿಕ್ರಂ ಭಾರದ್ವಾಜ್, ಯಶಸ್ವಿ, ಚಂದ್ರಕುಮಾರ್, ಅರುಣ್ ಕುಮಾರ್, ಹರೀಶ್ ಪೊಲೀಸ್ ಬ್ಯಾಂಡ್ ಪ್ರಸ್ತುತ ಪಡಿಸಿದರು. ಇದಕ್ಕೂ ಮುನ್ನ ನಡೆದ ಮಿತ್ರ ನವೀನ್ ಮತ್ತು ತಂಡದ ಭರತನಾಟ್ಯ ಕಾರ್ಯಕ್ರಮ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts