More

    ಸಂಕಷ್ಟದಲ್ಲಿ 120 ಹೆಳವರು ಲಾಕ್​ಡೌನ್

    ಅಕ್ಕಿಆಲೂರ: ಲಾಕ್​ಡೌನ್ ಘೊಷಿಸಿ 19 ದಿನವಾದರೂ ಸಮೀಪದ ಬಸಾಪುರ ಗ್ರಾಮದ ಬೆಟ್ಟದ ಮೇಲಿರುವ 21 ಕುಟುಂಬದ 120 ಅಲೆಮಾರಿ ಹೆಳವರಿಗೆ ತಾಲೂಕು ಆಡಳಿತ ಯಾವುದೇ ವ್ಯವಸ್ಥೆ ಕಲ್ಪಿಸದಿರುರುವುದು ದುರ್ದೈವದ ಸಂಗತಿ.

    ಜನರ ಮನೆಮನೆಗೆ ತೆರಳಿ ಅವರ ಕುಟುಂಬ ಮತ್ತು ಪುರ್ವಜರ ಇತಿಹಾಸ ಹೇಳಲು ಕಾರವಾರ ಜಿಲ್ಲೆ ಹಳಿಹಾಳ ತಾಲೂಕಿನಿಂದ ಹಾನಗಲ್ಲ ತಾಲೂಕಿಗೆ ಕಳೆದ ಮೂರು ತಿಂಗಳ ಹಿಂದೆ ಬಂದ 21 ಕುಟುಂಬಗಳು ಲಾಕ್​ಡೌನ್ ನಂತರ ದಿಕ್ಕು ತೋಚದೆ ಸಮೀಪದ ಬಸಾಪುರ ಬೆಟ್ಟದ ಮೇಲೆ ವಾಸವಾಗಿವೆ. 120 ಜನ ಹೆಳವರಲ್ಲಿ 5 ವರ್ಷದ ಒಳಗಿನ ಸಣ್ಣಪುಟ್ಟ ಮಕ್ಕಳು ಸಹ ಇವೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲಸ ಮಾಡಲಾಗದೆ, ಹಣವಿಲ್ಲದೆ ಆಹಾರ, ಅಗತ್ಯ ವಸ್ತುಗಳನ್ನು ಖರೀದಿಸಲು ಪರಿತಪ್ಪಿಸುತ್ತಿದ್ದಾರೆ. ಒಂದು ಹೊತ್ತಿನ ಊಟ ಮಾಡಿದರೆ ಇನ್ನೊಂದು ಹೊತ್ತಿನ ಊಟಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಅವರಿಗೆ ಸೌಲಭ್ಯ ಒದಗಿಸದಿರುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ.

    ದಿನಸಿ ಸಾಮಗ್ರಿ ವಿತರಣೆ: ಶನಿವಾರ ಮೋಹನಕುಮಾರ ಜನಸೇವಾ ಟ್ರಸ್ಟ್ ಪದಾಧಿಕಾರಿಗಳು ಹೆಳವರ ಕುಟುಂಗಳಿಗೆ ಅಡುಗೆ ಎಣ್ಣೆ, ಅಕ್ಕಿ, ರವೆ, ಬೇಳೆ, ತರಕಾರಿ, ವಿವಿಧ ಸಾಮಗ್ರಿಗಳನ್ನು ವಿತರಿಸಿದರು.

    ಕೂಡಲೆ ಸೌಲಭ್ಯ ಒದಗಿಸುವ ಭರವಸೆ: ಬಸಾಪುರ ಬೆಟ್ಟದಲ್ಲಿ ಹೆಳವರ ಜನಾಂಗ ಇದೆ ಎಂಬುದು ನಮಗೆ ತಿಳಿದಿರಲಿಲ್ಲ. ಶನಿವಾರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೊಡಲೆ ಅವರಿಗೆ ಆಹಾರ ಸಾಮಾಗ್ರಿ ವಿತರಿಸುತ್ತೇವೆ. ಅಗತ್ಯ ಬಿದ್ದರೆ ಅವರಿಗೆ ವಸತಿ ನಿಲಯ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚನ್ನಪ್ಪ ರಾಯಣ್ಣನವರ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts