More

    ಪೆಟ್ರೋಲ್​ ಬಂಕ್​ಗಳ ಮುಂದೆ ಜನವೋ ಜನ: ನಾಳೆಯೇ ಮುಷ್ಕರ ಎಂದು ಬಂದವರಿಂದಾಗಿ ನೂಕುನುಗ್ಗಲು!

    ಹುಬ್ಬಳ್ಳಿ: ನಾಳೆ ಪೆಟ್ರೋಲ್​-ಡೀಸೆಲ್​ ಬಂಕ್​​ಗಳ ಮುಷ್ಕರ ಇದೆ ಎಂದು ಭಾವಿಸಿದ ಜನರು​ ಬಂಕ್​ಗಳಲ್ಲಿ ಸಾಲುಗಟ್ಟಿ ನಿಂತ ದೃಶ್ಯ ಸೋಮವಾರ ಬೆಳಗ್ಗೆಯಿಂದಲೇ ಕಂಡುಬಂದಿತ್ತು.

    ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ (ಮೇ 31) ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌-ಡೀಸೆಲ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎನ್ನಲಾಗಿದೆ.

    ಪೆಟ್ರೋಲ್​ ಬಂಕ್​ಗಳ ಮುಂದೆ ಜನವೋ ಜನ: ನಾಳೆಯೇ ಮುಷ್ಕರ ಎಂದು ಬಂದವರಿಂದಾಗಿ ನೂಕುನುಗ್ಗಲು!

    ಪೆಟ್ರೋಲ್​-ಡೀಸೆಲ್ ಸಗಟು ಖರೀದಿಸದೆ ಬಂಕ್​ನವರು ಮುಷ್ಕರ ನಡೆಸುತ್ತಾರೆ. ಅದಾಗ್ಯೂ ಸಾಮಾನ್ಯವಾಗಿ ಬಂಕ್‌ಗಳಲ್ಲಿ ಎರಡರಿಂದ ಮೂರು ದಿನಗಳಿಗೆ ಆಗುವಷ್ಟು ದಾಸ್ತಾನು ಇರುತ್ತದೆ. ಹಾಗಾಗಿ ನಾಳಿನ ಒಂದು ದಿನದ ಮುಷ್ಕರದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಸ್ಟಾಕ್ ಇರದಿದ್ದರೆ ಅಥವಾ ಇರುವ ಸ್ಟಾಕ್​ ಖಾಲಿಯಾದರೆ ಮಾತ್ರ ಪೆಟ್ರೋಲ್​-ಡೀಸೆಲ್ ಲಭ್ಯತೆಯಲ್ಲಿ ವ್ಯತ್ಯಯ ಆಗಬಹುದು ಎಂದು ಬಂಕ್‌ ಮಾಲೀಕರು ಹೇಳಿದ್ದಾರೆ.

    ಆದರೆ ಸಾರ್ವಜನಿಕರಲ್ಲಿ ಹಲವರು ಪೆಟ್ರೋಲ್​-ಡೀಸೆಲ್ ಬಂಕ್​ಗಳೇ ನಾಳೆ ಬಂದ್ ಇರಲಿವೆ ಎಂದು ಭಾವಿಸಿ ಪೆಟ್ರೋಲ್​​ ಬಂಕ್​ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಹುಬ್ಬಳ್ಳಿಯ ಬಹುತೇಕ ಪೆಟ್ರೋಲ್​ ಬಂಕ್​ಗಳಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನೂರಾರು ಜನರು ಬಂಕ್​ಗಳ ಮುಂದೆ ಜಮಾಯಿಸಿದ್ದು ಕಂಡುಬಂದಿದೆ. ಕ್ಯಾನ್​, ಬ್ಯಾರಲ್​​ಗಳನ್ನು ತಂದು ವಾಹನ ಸವಾರರು ಸಾಲುಗಟ್ಟಿ ನಿಂತಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಯಂತ್ರಗಳನ್ನು ಬಳಸುವುದರಿಂದ ಹೆಚ್ಚಾಗಿ ರೈತರೇ ಬಂಕ್​ಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದಿತ್ತು. (ದಿಗ್ವಿಜಯ ನ್ಯೂಸ್​)

    ನಾಳೆ ಪೆಟ್ರೋಲ್‌ ಬಂಕ್‌ ಮಾಲೀಕರ ಸ್ಟ್ರೈಕ್‌: ವಾಹನ ಸವಾರರಿಗೆ ಇಲ್ಲಿದೆ ಮಹತ್ವದ ವಿಷಯ…

    ಪತನಗೊಂಡ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ: ಅಧಿಕಾರಿಗಳಿಂದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts