More

    ಶಾಹೀನ್​ ಬಾಗ್​ಗೆ ತೆರಳಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವಂತೆ ಇಬ್ಬರು ಹಿರಿಯ ವಕೀಲರಿಗೆ ಸೂಚಿಸಿದ ಸುಪ್ರೀಂಕೋರ್ಟ್​

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎರಡು ತಿಂಗಳಿಂದಲೂ ಶಾಹೀನ್​ ಬಾಗ್​​ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ರಸ್ತೆ ತಡೆ ಮಾಡಬಾರದು ಎಂದು ಆದೇಶ ನೀಡುವಂತೆ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ನಡೆಸಿದೆ.

    ಸಿಎಎ ವಿರೋಧಿ ಪ್ರತಿಭಟನಾಕಾರರು ಶಾಹೀನ್​ ಬಾಗ್​-ಕಾಳಿಂದಿ ಕುಂಜ್​ ರಸ್ತೆಯನ್ನು ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರೋಡ್​ಗಳನ್ನು ಬ್ಲಾಕ್​ ಮಾಡದೆ ಪ್ರತಿಭಟನೆ ನಡೆಸುವಂತೆ ಅವರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿ ವಕೀಲ ಅಮಿತ್​ ಸಹ್ನಿ ಮತ್ತು ಬಿಜೆಪಿ ಮುಖಂಡ ನಂದಕಿಶೋರ್​ ಜಾರ್ಜ್​ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್​ ಕಿಶನ್​ ಕೌಲ್​ ಮತ್ತು ಕೆ.ಎಂ.ಜೋಸೆಫ್​ ಅವರನ್ನೊಳಗೊಂಡ ಪೀಠ, ಜನರಿಗೆ ಪ್ರತಿಭಟನೆ ಮಾಡುವ ಹಕ್ಕನ್ನು ಪ್ರಜಾಪ್ರಭುತ್ವ ನೀಡಿದೆ. ಆದರೆ ರಸ್ತೆಗಳನ್ನು ತಡೆಯಬಾರದು. ತಮ್ಮಿಂದ ಉಳಿದವರಿಗೆ ತೊಂದರೆ ಮಾಡಬಾರದು. ಸಮತೋಲನವಾಗಿ ಪ್ರತಿಭಟಿಸಬೇಕು. ಗೊಂದಲಗಳನ್ನು ಸೃಷ್ಟಿಸಬಾರದು ಎಂದು ಹೇಳಿದೆ.

    ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ ಅದನ್ನು ಎಲ್ಲಿ ಮಾಡಬೇಕು ಎಂಬುದರ ಅರಿವು ಇರಬೇಕು. ರಸ್ತೆಗಳೆಲ್ಲ ಪ್ರತಿಭಟನೆ ಮಾಡುವ ಸ್ಥಳಗಳಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಅಲ್ಲದೆ, ಶಾಹೀನ್​ ಬಾಗ್​ಗೆ ತೆರಳಿ ಪ್ರತಿಭಟನಾಕಾರರ ಜತೆ ಮಾತನಾಡಿ, ರಸ್ತೆಗಳನ್ನು ತಡೆಯಬೇಡಿ ಎಂದು ಅವರಿಗೆ ಸೂಚಿಸಿ ಎಂದು ಹಿರಿಯ ವಕೀಲರಾದ ಸಂತೋಷ್​ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್​ ಅವರಿಗೆ ಸುಪ್ರೀಂ ಪೀಠ ಹೇಳಿದೆ. ಅಷ್ಟೇ ಅಲ್ಲ ಪ್ರತಿಭಟನಾಕಾರರನ್ನು ಶಾಹೀನ್​ ಬಾಗ್​ನಿಂದ ಸ್ಥಳಾಂತರಿಸಬಹುದಾದ ಪರ್ಯಾಯ ತಾಣವನ್ನೂ ಸೂಚಿಸಲು ಇಬ್ಬರು ವಕೀಲರಿಗೆ ತಿಳಿಸಿದೆ.

    ಕಾಳಿಂದಿ ಕುಂಜ್​ ರಸ್ತೆಯು ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳನ್ನು ಸಂಪರ್ಕಿಸುವ ಕಾರಣ ಒಂದು ಪ್ರಮುಖ ಮಾರ್ಗವಾಗಿದೆ. ಇಲ್ಲಿ ಸ್ಥಳೀಯರು ಮಾತ್ರವಲ್ಲದೆ, ಲಕ್ಷಾಂತರ ಸವಾರರು ಸಂಚಾರ ಮಾಡುತ್ತಾರೆ. ಆದರೆ ಸಿಎಎ ವಿರೋಧಿ ಪ್ರತಿಭಟನಾಕಾರರಿಂದಾಗಿ ಪ್ರತಿದಿನ ರೋಡ್​ ಬ್ಲಾಕ್​ ಆಗುತ್ತಿತ್ತು ಎನ್ನುವುದು ಅನೇಕ ಜನರ ಆರೋಪವಾಗಿತ್ತು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts