More

    ಹಿರಿಯರಿಗೆ ಪಿಂಚಣಿ ಭದ್ರತೆ

    ಬಣಕಲ್: ವೃದ್ಧಾಪ್ಯ ವೇತನ, ವಿಧವಾ ವೇತನ ಸೌಲಭ್ಯಗಳು ಗ್ರಾಮದ ಹಿರಿಯರಿಗೆ ತಲುಪದಿದ್ದಲ್ಲಿ ಅಥವಾ ನೋಂದಣಿ ಮಾಡದಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಪಿಂಚಣಿ ಸೌಲಭ್ಯದ ಮೂಲಕ ಹಿರಿಯರಿಗೆ ಸಾಮಾಜಿಕ ಭದ್ರತೆ ದೊರೆಯುವಂತಾಗಬೇಕು ಎಂದು ಬಣಕಲ್ ಹೋಬಳಿ ಗ್ರಾಮ ಲೆಕ್ಕಾಧಿಕಾರಿ ಬಿ.ಪಂಪನಾ ಹೇಳಿದರು.

    ಬಣಕಲ್ ಹಾಗೂ ತರುವೆ ಗ್ರಾಪಂನಲ್ಲಿ ನಡೆದ ಪಿಂಚಣಿ ದಿನಾಚರಣೆಯಲ್ಲಿ ಮಾತನಾಡಿ, ಸಮಾಜದಲ್ಲಿ ಹಿರಿಯರಿಗೆ ಸೌಲಭ್ಯಗಳು ಸಕಾಲದಲ್ಲಿ ಸಿಗುವಂತಾಗಬೇಕು. ಸೌಲಭ್ಯ ವಂಚಿತರಾಗಿ ಕೊರಗಬಾರದು ಎಂಬ ಹಿತದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಿಂಚಣಿ ಕೆಲವು ಸಮಯದಿಂದ ಸ್ಥಗಿತಗೊಂಡಿದ್ದರೆ ಕಂದಾಯ ಅಧಿಕಾರಿಗಳಿಗೆ ಅಥವಾ ಆಯಾ ಗ್ರಾಪಂಗಳಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಹರು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
    ತರುವೆ ಗ್ರಾಪಂ ಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ, ಕಂದಾಯ ಇಲಾಖೆಯಿಂದ ಪಿಂಚಣಿ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯ ಎಂದರು.
    ತರುವೆ ಹಾಗೂ ಬಣಕಲ್ ಗ್ರಾಪಂಗಳಲ್ಲಿ ಪಿಂಚಣಿದಾರರ ಸಮಸ್ಯೆ ಹಾಗೂ ಕುಂದು ಕೊರತೆಗಳನ್ನು ಚರ್ಚಿಸಿ ಅಹವಾಲುಗಳನ್ನು ಸ್ವೀಕರಿಸಲಾಯಿತು. ಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಯಿತು. ಹೊಸದಾಗಿ ಪಿಂಚಣಿಗೆ ಅರ್ಜಿ ಸ್ವೀಕರಿಸಲಾಯಿತು.
    ಉಪ ತಹಸೀಲ್ದಾರ್ ಇಂದು ಶೇಖರ್, ರಮ್ಯಾ, ಹನಿಷಾ, ತರುವೆ ಪ್ರಭಾರ ಪಿಡಿಒ ಮಹೇಶ್, ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಎ.ಎನ್.ರಘು, ಸ್ವರೂಪಾ ಪ್ರಶಾಂತ್, ಸುಶೀಲಾ, ಬಣಕಲ್ ಪಿಡಿಒ ಬಿ.ಎನ್.ಕೃಷ್ಣಪ್ಪ, ಗ್ರಾಪಂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts