More

    ತುಟ್ಟಿಭತ್ಯೆ, ನಿಶ್ಚಿತ ಪಿಂಚಣಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಿ ನೌಕರರ ಒಕ್ಕೂಟ ತಾಲೂಕು ಘಟಕ ಆಗ್ರಹ

    ಸಿಂಧನೂರು: ತುಟ್ಟಿಭತ್ಯೆ, ನಿಶ್ಚಿತ ಪಿಂಚಣಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ತಾಲೂಕು ಘಟಕ ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪರಿಗೆ ಶುಕ್ರವಾರ ಮನವಿ ಸಲ್ಲಿಸಿತು.

    ರಾಜ್ಯ ಸರ್ಕಾರಿ ನೌಕರರು ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಒತ್ತಡದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನೌಕರರ 18 ತಿಂಗಳ ತುಟ್ಟಿಭತ್ಯೆ ರದ್ದುಗೊಳಿಸಲಾಗಿದೆ. ಖಾಲಿ ಹುದ್ದೆ ಭರ್ತಿ ಮಾಡಿಲ್ಲ. ಕೇಂದ್ರ ಸರ್ಖಾರದ ಕಡ್ಡಾಯ ನಿವೃತ್ತಿ ಕುರಿತ ಆದೇಶವು ವಿಳಂಬವಾಗಿದೆ. ಇದರಿಂದ ನೌಕರರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಷೇರು ಮಾರುಕಟ್ಟೆ ಆಧಾರಿತ ಎನ್‌ಪಿಎಸ್‌ಅನ್ನು ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ ಮರುಸ್ಥಾಪಿಸುವ ನೌಕರರ ಕೂಗಿಗೆ ಯಾವುದೇ ಸ್ಪಂದನೆಯೂ ಸಿಗುತ್ತಿಲ್ಲ.

    2016 ರ ಸುಪ್ರಿಂ ಕೋರ್ಟ್ ತೀರ್ಪಿನ ಅನುಸಾರ ದಿನಗೂಲಿ/ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಶೀಘ್ರ ನೇರ ನೇಮಕಾತಿ ಮೂಲಕ ಭರ್ತಿಗೊಳಿಸಬೇಕೆಂದು ನೌಕರರು ಒತ್ತಾಯಿಸಿದರು. ತಾಲೂಕು ಘಟಕದ ಖಜಾಂಚಿ ಎಚ್.ಎಫ್.ಮಸ್ಕಿ, ಸಂಘಟನಾ ಕಾರ್ಯದರ್ಶಿ ಕೊಟ್ರೇಶ ಚಕ್ರಸಾಲಿ, ಹೇಮಣ್ಣ, ಅಬ್ಬಾಸ್‌ಅಲಿ, ಯಂಕಪ್ಪ ಗುಂಜಳ್ಳಿ, ವೀಣಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts