More

    ಆರೋಗ್ಯ ವಿಮಾ ಕಂಪನಿಗೆ ದಂಡ

    ಧಾರವಾಡ: ಆರೋಗ್ಯ ವಿಮೆಯ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿದ ಆರೋಗ್ಯ ವಿಮಾ ಕಂಪನಿಗೆ ದಂಡ ವಿಽಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
    ಇಲ್ಲಿನ ರಾಣಿ ಚೆನ್ನಮ್ಮನಗರದ ನಿವಾಸಿಗಳಾದ ಸಿ.ಎಂ. ರಮೇಶ- ಸುಶೀಲಾ ದಂಪತಿ 2020ರ ಅ. 29ರಂದು 17895 ರೂ. ಪ್ರೀಮಿಯಂ ಭರಿಸಿ ಚೋಳಮಂಡಲ೦ ವಿಮಾ ಕಂಪನಿಯ ಆರೋಗ್ಯ ವಿಮೆ ಪಡೆದಿದ್ದರು. ಪ್ರತಿವರ್ಷ ವಿಮೆ ನವೀಕರಿಸಿದ್ದರು. ಕಣ್ಣಿನ ತೊಂದರೆಯಾದಾಗ 2022ರ ಏಪ್ರಿಲ್‌ನಲ್ಲಿ ಇಬ್ಬರೂ ಕೇರಳದ ಎರ್ನಾಕುಲಮ್ ಆಯುರ್ವೆದಿಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕೆತ್ಸೆ ಪಡೆದಿದ್ದರು. 1,08,565 ರೂ. ಆಸ್ಪತ್ರೆಯ ಬಿಲ್ ಅನ್ನು ಹಣ ಸಂದಾಯಕ್ಕಾಗಿ ವಿಮಾ ಕಂಪನಿಗೆ ಸಲ್ಲಿಸಿದ್ದರು. ಆದರೆ, ಕ್ಲೇಮ್ ಅರ್ಜಿಯಲ್ಲಿ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ವಿಮಾ ಕಂಪನಿ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಮೇಶ- ಸುಶೀಲಾ ದಂಪತಿ ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
    ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು, ಕ್ಲೇಮುದಾರರು ಮೊದಲೇ ರೋಗ- ರುಜಿನದಿಂದ ಬಳಲುತ್ತಿರುವ ವಿಷಯವನ್ನು ಬಚ್ಚಿಟ್ಟದ್ದಾರೆ ಎಂಬ ಸಂಗತಿಯನ್ನು ಸಾಬೀತುಪಡಿಸಲು ವಿಮಾ ಕಂಪನಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ಲೇಮುದಾರರ ವಿಮಾ ಪಾಲಸಿ ಚಾಲ್ತಿಯಲ್ಲಿರುವುದರಿಂದ ಅವರ ಚಿಕಿತ್ಸೆಯ ಖರ್ಚನ್ನು ಭರಿಸುವುದು ವಿಮಾ ಕಂಪನಿಯ ಕರ್ತವ್ಯ. ಆದ್ದರಿಂದ ಆಸ್ಪತ್ರೆಯ ಖರ್ಚು 1,08,565 ರೂ.ಗಳನ್ನು ಸಂದಾಯ ಮಾಡಬೇಕು. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ತಲಾ 25,000 ರೂ. ಮತ್ತು ಪ್ರಕರಣದ ವೆಚ್ಚ 10,000 ರೂ. ಪಾವತಿಸಬೇಕು ಎಂದು ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts