More

    ದಂಡದ ಮೊತ್ತ ವಾಪಸ್ ನೀಡಿದ ಪೊಲೀಸರು!

    ಮಂಗಳೂರು: ಖಾಸಗಿ(ವೈಟ್ ಬೋರ್ಡ್) ಕಾರಿನ ಚಾಲಕ ಸಮವಸ್ತ್ರ ಧರಿಸಿಲ್ಲ ಎನ್ನುವ ಕಾರಣಕ್ಕೆ ತಪ್ಪಾಗಿ 500 ರೂ. ದಂಡ ವಿಧಿಸಿದ ಬಂಟ್ವಾಳ ಪೊಲೀಸರು ಬಳಿಕ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಹಣ ಹಿಂತಿರುಗಿಸಿದ್ದಾರೆ.

    ಸಮವಸ್ತ್ರ ಧರಿಸಿಲ್ಲ ಎನ್ನುವ ಕಾರಣ ನೀಡಿ ಖಾಸಗಿ ವಾಹನ(ವೈಟ್‌ಬೋರ್ಡ್)ದ ಚಾಲಕರಿಗೆ ದಂಡ ವಿಧಿಸುವಂತಿಲ್ಲ. ಈ ನಿಯಮ ಕೇವಲ ಎಲ್ಲೋ ನಂಬರ್ ಪ್ಲೇಟ್‌ನ ವಾಹನ ಚಾಲಕರಿಗೆ ಅನ್ವಯವಾಗುತ್ತದೆ. ಮಾ.23ರಂದು ರಾಮಲ್‌ಕಟ್ಟೆ ಎಂಬಲ್ಲಿ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಸಮವಸ್ತ್ರ ಧರಿಸದ ಪಾಣೆಮಂಗಳೂರು ಮೂಲದ ಕಾರು ಚಾಲಕರೊಬ್ಬರಿಗೆ 500 ರೂ.ದಂಡ ವಿಧಿಸಿದ್ದರು. ಮಾ.25ರಂದು ಪೊಲೀಸ್ ನೀಡಿದ ದಂಡದ ರಶೀದಿಯನ್ನು ನೋಡಿದ ಅವರ ಪುತ್ರ ಇದನ್ನು ಎಸ್‌ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು.

    ಎಸ್‌ಪಿ ಅವರು ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದು, ಶೀಘ್ರವೇ ಸ್ಪಂದಿಸಿ ಗುರುವಾರ ದಂಡ ಹಾಕಿದ ಪೊಲೀಸರ ಮೂಲಕ ಕಾರು ಚಾಲಕನಿಗೆ 500 ರೂ. ಹಿಂತಿರುಗಿಸಿದ್ದಾರೆ. ಅಧೀಕ್ಷಕರು ತಕ್ಷಣ ಸ್ಪಂದಿಸಿರುವುದು ಶ್ಲಾಘನೆಗೆ ಪಾತ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts