More

    ಭೀಮ್​ ಆರ್ಮಿ ಮುಖ್ಯಸ್ಥನನ್ನು ಹೊರದೂಡಿದ ಹೈದರಾಬಾದ್​ ಪೊಲೀಸರು: ಸರ್ವಾಧಿಕಾರ ತುತ್ತತುದಿಯಲ್ಲಿದೆ ಎಂದು ಕಿಡಿ!

    ಹೈದರಾಬಾದ್​/ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ ಅವರನ್ನು ಭಾನುವಾರ ಸಂಜೆ ಹೈದರಾಬಾದ್​ ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಅಜಾದ್​, ವಾಪಸ್ಸು ದೆಹಲಿಗೆ ಕಳುಹಿಸಲಾಗಿದೆ. ಅಲ್ಲದೆ, ಬಂಧಿಸುವ ಮುನ್ನ ನನ್ನ ಬೆಂಬಲಿಗರು ಮೇಲೆಯೂ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ತೆಲಂಗಾಣದಲ್ಲಿ ಸರ್ವಾಧಿಕಾರ ತುತ್ತತುದಿಯಲ್ಲಿದೆ. ಮೊದಲು ನಮ್ಮ ಜನರನ್ನು ದಂಡಗಳಿಂದ ಥಳಿಸಿ ಬಳಿಕ ಬಂಧಿಸಲಾಯಿತು. ಬಳಿಕ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಕರೆತಂದು ವಾಪಸ್ಸು ದೆಹಲಿಗೆ ಕಳುಹಿಸಿದರು ಎಂದು ಇಂದು ಬೆಳಗ್ಗೆ ಟ್ವೀಟ್​ ಮಾಡಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಕಚೇರಿಯ್ನನು ಟ್ಯಾಗ್​ ಮಾಡಿದ್ದಾರೆ. ಅಲ್ಲದೆ, ಬಹುಜನ ಸಮಾಜ ಈ ಅವಮಾನವನ್ನು ಸಹಿಸುವುದಿಲ್ಲ. ಆದಷ್ಟು ಬೇಗ ಮತ್ತೆ ಮರಳುವೇ ಎಂದು ಹೇಳಿದ್ದಾರೆ.

    ಭಾನುವಾರ ಹೈದರಾಬಾದ್​ನ ಮೆಹದಿಪಟ್ನಂನ ಕ್ರೈಸ್ಟಲ್​ ಗಾರ್ಡನ್​ ಆಯೋಜಿಸಲಾಗಿದ್ದ ಸಿಎಎ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಅಜಾದ್​ ಮತ್ತವರ ಬೆಂಬಲಿಗರನ್ನು ಹೈದರಾಬಾದ್​ ಪೊಲೀಸರು ವಶಕ್ಕೆ ಪಡೆದಿದ್ದರು.

    ಸಾರ್ವಜನಿಕ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಹೀಗಾಗಿ ಸೆಕ್ಷನ್​ 151 ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೈದರಾಬಾದ್​ ಪೊಲೀಸ್​ ಆಯುಕ್ತರಾದ ಅಂಜನಿ ಕುಮಾರ್​ ತಿಳಿಸಿದ್ದರು. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ತಿಳಿದುಬಂದಲ್ಲಿ ಭಾರತೀಯ ದಂಡ ಸಂಹಿತೆ 151 ಸೆಕ್ಷನ್ ಅಡಿಯಲ್ಲಿ ಯಾರನ್ನು ಬೇಕಾದರು ವಶಕ್ಕೆ ಪಡೆಯುವ ಅಧಿಕಾರ ಪೊಲೀಸರಿಗೆ ಇದೆ.

    ಕಳೆದ ತಿಂಗಳು ದೆಹಲಿಯ ದರಿಯಾಗಂಜ್​ನಲ್ಲಿ ಪ್ರತಿಭಟನಾ ವೇಳೆ ಬಂಧಿಯಾಗಿದ್ದ ಅಜಾದ್​, ಜನವರಿ 16ರಂದು ಜಾಮೀನು ಪಡೆದ ತಿಹಾರ್​ ಜೈಲಿನಿಂದ ಹಿಂದಿರುಗಿ ಬಂದಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts