More

    ಆಧ್ಮಾತ್ಮಿಕತೆ, ಧಾರ್ಮಿಕತೆಯಿಂದ ಮಾನಸಿಕ ನೆಮ್ಮದಿ: ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ

    ತಿಪಟೂರು: ಶ್ರೀಮಠಕ್ಕೆ ಭಕ್ತರೇ ಆಧಾರ ಸ್ತಂಭವಾಗಿದ್ದು, ಅವರು ನೀಡಿದ ಧಾನ ಧರ್ಮದಿಂದ ಸಾವಿರಾರು ಮಕ್ಕಳಿಗೆ ಅನ್ನ, ಜ್ಞಾನ ದಾಸೋಹ ನೀಡಿ ರೈತರು ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

    ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಗುರುಸಪ್ತಾಹದ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀ ಗುರು ಸಪ್ತಾಹಕ್ಕೆ 58 ವರ್ಷ ಇತಿಹಾಸವಿದ್ದು, ಭಕ್ತರಿಗೆ ಆಧ್ಮಾತ್ಮಿಕತೆ ಮತ್ತು ಧಾರ್ಮಿಕತೆಯಿಂದ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ದೊರಕಲಿದೆ. ಧ್ಯಾನ, ಯೋಗದ ಮೂಲಕ ಪರಮಾತ್ಮನಲ್ಲಿ ಲೀನರಾಗಬೇಕು. ಸಮಾಜದ ಎಲ್ಲ ಜಾತಿ, ಜನಾಂಗಗಳು ಕ್ಷೇತ್ರದ ಬಗ್ಗೆ ಇಟ್ಟಿರುವ ವಿಶೇಷ ಅಭಿಮಾನ ಮಠದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

    ಮಠದ ವತಿಯಿಂದ ತಿಪಟೂರಿನಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಕ್ಕಳಿಗೆ ವಿದ್ಯಾದಾನ, ಅನ್ನದಾನವನ್ನು ರಾಜ್ಯದಲ್ಲಿ ವೀರಶೈವ ಮಠಗಳು ಮಾಡುತ್ತಿದ್ದು, ಶ್ರೀ ಮಠವು ಸಾವಿರಾರು ಮಕ್ಕಳಿಗೆ ಅನ್ನ, ಜ್ಞಾನ ದಾಸೋಹ ನೀಡುವ ಮೂಲಕ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ರಂಗಾಪುರ ಶ್ರೀಗಳ ಶಕ್ತಿ, ಪವಾಡ ಹಾಗೂ ಅವರ ಜನಪರ, ರೈತಪರ ಹಾಗೂ ಶಿಕ್ಷಣದ ಕಾಳಜಿ ಮೆಚ್ಚುವಂತಾಗಿದ್ದು, ಲಿಂಗಾಯತ ಮತ್ತು ವೀರಶೈವರು ಒಳ ಪಂಗಡಗಳನ್ನು ಮರೆತು ಒಂದಾಗುವ ಮೂಲಕ ಶಕ್ತಿ ಪ್ರದರ್ಶಿಸಬೇಕು ಎಂದರು. ಶ್ರೀಮಠವು ಜ್ಞಾನ, ಅನ್ನದಾಸೋಹದ ಜತೆಗೆ ತಾಲೂಕಿನ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸಿ.ನಾಗೇಶ್ ಹೇಳಿದರು.

    ಶಾಸಕ ಮಸಾಲೆ ಜಯರಾಂ, ಬೇಲೂರು ಶಾಸಕ ಕೆ.ಎಸ್.ಲಿಂಗೇಶ್, ಮಾಜಿ ಶಾಸಕ ಕೆ.ಷಡಕ್ಷರಿ, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ಬಿಜೆಪಿ ಮುಖಂಡ ಲೋಕೇಶ್ವರ ಮಾತನಾಡಿದರು. ಶ್ರೀ ಗುರುಸಪ್ತಾಹ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಆಲ್ಬೂರು ಶ್ರೀ ಶನಿನೇಶ್ವರ ಮಠದ ಶ್ರೀ ನರಸಿಂಹಸ್ವಾಮೀಜಿ, ನಮ್ರತ ಅಯಿಲ್ ರಿಫೈನರೀಸ್ ಉದ್ಯಮಿಗಳಾದ ಬಿ.ಎಸ್.ಅರುಣ್‌ಕುಮಾರ್, ಶಿವಪ್ರಸಾದ್, ಅಖಿಲ ಭಾರ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಣಬೆ ರಾಜಣ್ಣ, ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಯು.ಕೆ.ಶಿವಪ್ಪ, ಉಪಾಧ್ಯಕ್ಷ ಉಂಡಿಗನಾಳು ಬಸವರಾಜು ಇದ್ದರು.

    ಸರ್ಕಾರಗಳು ನೀರಾವರಿ ಯೋಜನೆಗೆ ಕೋಟ್ಯಂತರ ರೂ. ಮಂಜೂರು ಮಾಡಿದ್ದೇವೆಂದು ಬೊಬ್ಬೆ ಹೊಡೆಯುತ್ತಾ ರೈತರ ದಿಕ್ಕು ತಪ್ಪಿಸುತ್ತಿವೆ. ಎತ್ತಿನಹೊಳೆ ಯೋಜನೆಯನ್ನು ಮುಗಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು.
    ಕೆ.ಎಂ.ಶಿವಲಿಂಗೇಗೌಡ ಅರಸೀಕೆರೆ ಶಾಸಕ

    ಸರ್ಕಾರ ಮಾಡದ ಅನೇಕ ಜನರ ಕಾರ್ಯಗಳನ್ನು ಮಠ ಮಂದಿರಗಳು ಮಾಡುತ್ತಿವೆ. ಅಧಿಕಾರ, ಐಶ್ವರ್ಯ ಯಾವುದೂ ಶಾಶ್ವತವಲ್ಲ. ದೇವರು ಕೊಟ್ಟಿರುವ ಸ್ವಲ್ವ ಭಾಗವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಿಕೊಳ್ಳಬೇಕು.
    ಜೆ.ಸಿ.ಮಾಧುಸ್ವಾಮಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts