More

    ಜಿಲ್ಲಾ ಮಟ್ಟದಲ್ಲಿ PDO of the month ಪ್ರಶಸ್ತಿ

    ಕಾರವಾರ: ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಸರ್ಕಾರದ ಯೋಜನೆ ತಲುಪಿಸುವ ಹಾಗೂ ಸಾಕಷ್ಟು ಸಮಸ್ಯೆಗಳ ನಡುವೆ ಕಾರ್ಯನಿರ್ವಹಿಸುವ ಗ್ರಾಪಂ ಅಭಿವದ್ಧಿ ಅಧಿಕಾರಿ (ಪಿಡಿಒ) ಗಳನ್ನು ಪ್ರೋತ್ಸಾಹಿಸಲು ಅವರಿಗೆ ಪ್ರತಿ ತಿಂಗಳು ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲು ಜಿಪಂ ಸಿಇಒ ಈಶ್ವರ ಕಾಂದೂ ಮುಂದಾಗಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಿಡಿಒಗಳ ಕಾರ್ಯಕ್ಷಮತೆ, ದಕ್ಷತೆ, ಅಭಿವದ್ಧಿ ಕಾರ್ಯಕ್ರಮಗಳಲ್ಲಿ ಸಾಧಿಸಿದ ಪ್ರಗತಿ ಹಾಗೂ ಸಾರ್ವಜನಿಕರಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅತ್ತ್ಯುತ್ತಮ ಪಂಚಾಯತ್ ಅಭಿವದ್ಧಿ ಅಧಿಕಾರಿ ‘PDO of the month’ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಉದ್ಯೋಗ ಖಾತ್ರ, ಸ್ವಚ್ಛಾ ಭಾರತ ಮಿಷನ್, ಗ್ರಾಪಂ ಕಟ್ಟಡಕ್ಕೆ ಸೋಲಾರ್ ಅಳವಡಿಕೆ, ತೆರಿಗೆ ಸಂಗ್ರಹಣೆ ಮತ್ತು ಪಂಚತಂತ್ರದಲ್ಲಿ ಅಪ್‌ಲೋಡ್ ಮಾಡುವುದು, ಗ್ರಾಪಂ ಗ್ರಂಥಾಲಯಗಳ ಡಿಜಿಟಲೀಕರಣ ಮತ್ತು ಉನ್ನತೀಕರ, 15 ನೇ ಹಣಕಾಸಿನ ವಾರ್ಷಿಕ ವೆಚ್ಚಗಳು, ವಸತಿ ವಿಭಾಗದಲ್ಲಿ ಮನೆಗಳ ಜಿಪಿಎಸ್, ಸಕಾಲ ವಿಭಾಗದಲ್ಲಿ ಅರ್ಜಿಗಳ ವಿಲೇವಾರಿ, ಇಎಸ್‌ಸಿಆರ್‌ಒಡಬ್ಲ್ಯು ವಿಭಾಗದಲ್ಲಿ ಹೆಸ್ಕಾಂ ಕಡಿಮೆ ಬಿಲ್ ಬಾಕಿ ಸೇರಿ ಒಟ್ಟಾರೆ 100 ಅಂಕಗಳನ್ನು ನಿಗದಿ ಮಾಡಿ ಮಾನದಂಡವನ್ನು ಗುರುತಿಸಲಾಗಿದೆ.

    ಇವುಗಳಲ್ಲಿ ಹೆಚ್ಚು ಅಂಕ ಪಡೆದ ಪಿಡಿಒಗಳ ಹೆಸರನ್ನು ಪ್ರತಿ ತಿಂಗಳು 5ರೊಳಗೆ ಆಯಾ ತಾಪಂ ಇಒಗಳು ಶಿಾರಸು ಮಾಡಲಿದ್ದು, ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ, ಉಪ ಕಾರ್ಯದರ್ಶಿ(ಅಭಿವದ್ಧಿ) ಉಪ ಕಾರ್ಯದರ್ಶಿ(ಆಡಳಿತ), ಮುಖ್ಯ ಲೆಕ್ಕಾಕಾರಿ, ಮುಖ್ಯ ಯೋಜನಾಕಾರಿ, ಯೋಜನಾ ನಿರ್ದೇಶಕರು(ಡಿಆರ್‌ಡಿಎ) ಸಮಿತಿಯು ಅತ್ಯುತ್ತಮ ಪಿಡಿಒ ಹೆಸರನ್ನು 7ನೇ ತಾರೀಕಿನ ಒಳಗೆ ಆಯ್ಕೆ ಮಾಡಲಿದೆ.

    ಗ್ರಾಮೀಣ ಪ್ರದೇಶದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಅಭಿವದ್ಧಿ ಅಧಿಕಾರಿಗಳ ಕಾರ್ಯಕ್ಷಮತೆ, ಧಕ್ಷತೆ ಹಾಗೂ ಯೋಜನೆಗಳ ಅಭಿವದ್ಧಿ ಕಾರ್ಯಕ್ರಮಗಳಲ್ಲಿ ಸಾಧಿಸಿದ ಪ್ರಗತಿ ಹಾಗೂ ಸಾರ್ವಜನಿಕರಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ವಿನೂತನ ಕಾರ್ಯ ಇದಾಗಿದೆ. ಇದರಿಂದ ಪಿಡಿಒಗಳಿಗೆ ಕೆಲಸಕ್ಕೆ ಉತ್ತೇಜನ ದೊರೆಯಲಿದೆ.

    -ಈಶ್ವರ ಕಾಂದೂ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts